ETV Bharat / state

ನಾವು ಮುಸ್ಲಿಮರ ವೋಟು ಅವಲಂಬಿಸಿಲ್ಲ, ಅವರ ಬಳಿ ಹೋಗಿ ನಾನು ಮತ ಕೇಳಿಲ್ಲ: ಕೆ.ಎಸ್. ಈಶ್ವರಪ್ಪ

ಕಾಂಗ್ರೆಸ್-ಜೆಡಿಎಸ್ ನಾಯಕರು ಮುಸ್ಲಿಂರ ಓಲೈಕೆಗೆ ಆರ್​ಎಸ್​ಎಸ್ ಬೈಯ್ತಾರೆ. ಅವರ ವೋಟು ಬಂದು ಬಿಡುತ್ತೆ ಎಂಬ ಚಿಂತನೆಯಲ್ಲಿದ್ದಾರೆ. ಅವರ ವೋಟುಗಳನ್ನ ನೀವು ತಗೊಳ್ಳಿ. ಬಿಜೆಪಿ ಬಹಳ ಕಡೆ ಮುಸ್ಲಿಂರ ವೋಟಿನ ಮೇಲೆ ಅವಲಂಬಿಸಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

K. S. Eshwarappa
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
author img

By

Published : Jun 26, 2022, 5:30 PM IST

ಶಿವಮೊಗ್ಗ: ಬಿಜೆಪಿ ಬಹಳ ಕಡೆ ಮುಸ್ಲಿಂ ವೋಟ್​ಗಳ ಮೇಲೆ ಅವಲಂಬಿತವಾಗಿಲ್ಲ. ಶಿವಮೊಗ್ಗದಲ್ಲಂತೂ ಹಾಗೇ ಇಲ್ಲ, ನಾನು ಅವರ ಬೀದಿಗೆ ಹೋಗಿ ಮತ​ ಕೇಳಿಲ್ಲ. ಆದ್ರೂ ಅವರು ವೋಟು ಕೊಡ್ತಾ ಇದ್ದಾರೆ. ಕಾರಣ ಅಭಿವೃದ್ಧಿ ಕೆಲಸ ಆಗ್ತಾ ಇದೆ. ಹಾಗಾಗಿ ಅದನ್ನು ನೋಡಿ ನಮಗೆ ವೋಟ್​ ಕೊಡ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್​ಗೆ ಬೈಯುವ ಕೆಟ್ಟ ಚಾಳಿ ಸಿದ್ದರಾಮಯ್ಯಗೆ ಇತ್ತು. ಒಂದು ಏರಿಯಾದಲ್ಲಿ ರಸ್ತೆ ಹಾಳಾಗಿರೋದು ನಿಜ. ಪ್ರಧಾನಿ ಮೋದಿ ಬೆಂಗಳೂರು-ಮೈಸೂರಿಗೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ರಸ್ತೆ ಹಾಳಾಗಿರೋದು ತಪ್ಪೇ. ಅರ್ಜೆಂಟ್​ನಲ್ಲಿ ಮಾಡುವಾಗ ಹಾಳಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಅದಕ್ಕೋಸ್ಕರ 40% ಸರ್ಕಾರ ಎನ್ನುವುದು ಸರಿ ಅಲ್ಲ ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಮುಸ್ಲಿಂ ಓಲೈಕೆಗೆ ಆರ್​ಎಸ್​ಎಸ್​​ ಬೈತಾರೆ: ಕಂಟ್ರ್ಯಾಕ್ಟರ್ ಹಣ ಕೊಟ್ಟಿರೋದು ಸಾಬೀತು ಮಾಡಲಿ. ಪದೇ ಪದೇ ಪರ್ಸೆಂಟ್ ಕಮಿಷನ್ ಬಗ್ಗೆ ಹೇಳ್ತಾ ಹೋದರೆ ಉತ್ತರ ಕೊಡಲಾಗದು‌. ಆರ್​ಎಸ್​ಎಸ್ ವಿರುದ್ಧ ಹೇಳಿಕೆ ನೀಡುವುದು ಸಿದ್ದರಾಮಯ್ಯ ಚಾಳಿ, ಆ ಚಾಳಿ ಈಗ ಕುಮಾರಸ್ವಾಮಿಗೆ ಬಂದಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಮುಸ್ಲಿಂ ಓಲೈಕೆಗೆ ಆರ್​ಎಸ್​ಎಸ್ ಬೈಯ್ತಾರೆ. ಅವರ ವೋಟು ಬಂದು ಬಿಡುತ್ತೆ ಎಂಬ ಚಿಂತನೆಯಲ್ಲಿದ್ದಾರೆ. ಅವರ ಮತಗಳನ್ನ ನೀವು ತಗೊಳ್ಳಿ. ಬಿಜೆಪಿ ಬಹಳ ಕಡೆ ಮುಸ್ಲಿಂ ಮತಗಳನ್ನು ಅವಲಂಬಿಸಿಲ್ಲ. ಜನ ವೋಟು ಕೊಡ್ತಾ ಇದ್ದಾರೆ, ಅಭಿವೃದ್ಧಿ ಕೆಲಸ ಆಗ್ತಾ ಇದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಗುಂಡಿ ಬಿದ್ದ ರಸ್ತೆ ನೋಡಲು ಬಂದ ಅಧಿಕಾರಿಗಳಿಗೆ ಮಲೆನಾಡಿಗರಿಂದ ಫುಲ್ ಕ್ಲಾಸ್

ಕುಮಾರಸ್ವಾಮಿ ಮುಂದಿನ ಸಿಎಂ ಎಂಬ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾವ ಕಾರಣಕ್ಕೂ ಬೇರೆ ಪಕ್ಷದವರು ಸಿಎಂ ಆಗಲ್ಲ. ಬಿಜೆಪಿಯವರೇ ಸಿಎಂ ಆಗ್ತಾರೆ. ಆಯಾ ಪಕ್ಷದ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ಅವರಿಗೆ ಬಿಟ್ಟಿದ್ದು‌. ಬಿಜೆಪಿ ಚೆನ್ನಾಗಿದೆ ಎಂದು ಬರ್ತಾರೆ. ಬಂದವರಿಗೆ ಬರಬೇಡಿ ಎಂದು ಹೇಳಕಾಗುತ್ತಾ? ರಾಜ್ಯದಲ್ಲಿ ಬಿಜೆಪಿ ಜೊತೆ ಬಂದವರು ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಎಂದರು.

ಮನೆ ಮಗನನ್ನ ಚೆನ್ನಾಗಿ ಇಟ್ಟುಕೊಳ್ಳಿ: ಶಾಸಕರನ್ನ ನೀವು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರನ್ನು ಚೆನ್ನಾಗಿ ನಡೆಸಿಕೊಳ್ಳಿ. ಆಗ ಅವರೇಕೆ ಬೇರೆ ಪಕ್ಷದ ಜೊತೆ ಹೋಗುತ್ತಾರೆ? ಮಹಾರಾಷ್ಟ್ರದ ಸಿಎಂ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶಾಸಕರು ಬೇಸರಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ನೋಡಿ ಮೆಚ್ಚಿದ್ದಾರೆ. ಬಿಜೆಪಿಯವರು ಯಾಕೆ ಬೇಡ ಅಂತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.