ಶಿವಮೊಗ್ಗ: ಕರ್ತವ್ಯದಲ್ಲಿದ್ದ ವಾಟರ್ ಲೈನ್‌ಮ್ಯಾನ್ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ.
ನಾಗರಾಜ್ (55) ಮೃತ ವಾಟರ್ ಲೈನ್‌ಮ್ಯಾನ್. ಕಳೆದ 25 ವರ್ಷಗಳಿಂದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಬಂದು ನೀರು ಬಿಡುವ ವೇಳೆ ನಾಗರಾಜ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ ದಾರಿಮಧ್ಯದಲ್ಲೇ ಅವರು ಮೃತಪಟ್ಟಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ನಾಗರಾಜ್ ಅವರದ್ದು ಬಡ ಕುಟುಂಬ. ಇವರಿಗೆ ಪತ್ನಿ, ಇಬ್ಬರು ಹಣ್ಣುಮಕ್ಕಳಿದ್ದಾರೆ. ಈ ಕುಟುಂಬಕ್ಕೆ ವಾಸ್ತವ್ಯಕ್ಕೆ ಮನೆಯೂ ಇಲ್ಲ. ಹೀಗಾಗಿ ಒಂದು ನಿವೇಶನ, 25 ಲಕ್ಷ ರೂ. ಪರಿಹಾರ ಹಾಗೂ ಮೃತ ಕುಟುಂಬದ ಓರ್ವರಿಗೆ ನೌಕರಿ ನೀಡಬೇಕೆಂದು ಆಗ್ರಹಿಸಿ ಶವಾಗಾರದ ಮುಂದೆಯೇ ಪ್ರತಿಭಟನೆ ನಡೆಯಿತು.
ಇದನ್ನೂ ಓದಿ: ಪಕ್ಷ ಒಪ್ಪಿದ್ರೆ ಕನಕಪುರದಿಂದಲೇ ಸ್ಪರ್ಧಿಸುವೆ: ಸಿ.ಪಿ.ಯೋಗೇಶ್ವರ್