ಶಿವಮೊಗ್ಗ : ರವೀಂದ್ರ ನಗರ ಮತ್ತು ರಾಜೇಂದ್ರ ನಗರ ನಿವಾಸಿಗಳ ಸಂಘದಿಂದ ಜಾಗಟೆ ಮತ್ತು ಶಂಖ ಬಾರಿಸುವುದರ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು.
ಚುನಾವಣೆಗೆ ಕೇವಲ 2 ದಿನಗಳು ಬಾಕಿ ಇದ್ದು, ನಗರದ ಜನರಿಗೆ ಮತದಾನ ಜಾಗೃತಿ ಮೂಡಿಸಲು ರವೀಂದ್ರ ನಗರ ಮತ್ತು ರಾಜೇಂದ್ರ ನಗರ ನಿವಾಸಿಗಳ ಸಂಘದಿಂದ ಜಾಗಟೆ ಮತ್ತು ಶಂಖ ಬಾರಿಸುವುದರ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಮೂಲಕ ಮತದಾರರಲ್ಲಿ ಅರಿವು ಮೂಡಿಸಿದರು.