ಶಿವಮೊಗ್ಗ: ಮತದಾನ ಮಾಡುವಂತೆ ಮತದಾರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಲೀಟರ್ ಪೆಟ್ರೋಲ್ಗೆ 2 ರೂ. ವಿನಾಯಿತಿ ನೀಡಿ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ವಿಶಿಷ್ಟವಾಗಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.
ಪೆಟ್ರೋಲ್ ದರ ಗಗನಕ್ಕೇರಿರುವ ಪರಿಸ್ಥಿತಿಯಲ್ಲಿಯೂ ಮತದಾನ ಮಾಡಿದ್ರೆ ಪ್ರತಿ ಲೀಟರ್ಗೆ 2 ರೂ. ಡಿಸ್ಕೌಂಟ್ ಸಿಗುತ್ತೆ. ಅಂದಹಾಗೆ ಇದು ಯಾವುದೇ ಸರ್ಕಾರದ ಯೋಜನೆ ಅಲ್ಲ. ಬದಲಿಗೆ ಶಿವಮೊಗ್ಗದ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಅತಿ ಹೆಚ್ಚು ಮತದಾನ ಆಗಲಿ ಎಂಬ ಸದುದ್ದೇಶದಿಂದ ಈ ರೀತಿಯ ಆಫರ್ ಕೊಟ್ಟಿದ್ದಾರೆ.
ಪ್ರಜಾಪ್ರಭುತ್ವ ಉಳಿವಿಗಾಗಿ ಎಲ್ರೂ ತಪ್ಪದೇ ವೋಟ್ ಮಾಡಿ, ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳಿ. ಈ ಮೂಲಕ ಒಳ್ಳೆಯ ಸರ್ಕಾರ ಬರಲಿ ಎಂಬುದು ಬಂಕ್ ಮಾಲೀಕ ಅವಿನಾಶ್ ಅವರ ಆಶಯ.