ETV Bharat / state

ಚುನಾವಣಾ ಶುಲ್ಕವಾಗಿ ಒಂದು ರೂ. ನಾಣ್ಯಗಳನ್ನು ನೀಡಿದ ಪಕ್ಷೇತರ ಅಭ್ಯರ್ಥಿ! - ಶಿಕಾರಿಪುರ ವಿಧಾನಸಭಾ ಕ್ಷೇತ್ರ

ಮಲೆನಾಡಿನ ಸ್ಟೈಲ್ ನಲ್ಲಿ ತಲೆಗೆ ಅಡಿಕೆ ಟೋಪಿ, ಪಂಚೆ ತೊಟ್ಟು ಎತ್ತಿನಗಾಡಿಯ ಮೂಲಕ ಆಗಮಿಸಿ, ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ನಾಮಪತ್ರ ಸಲ್ಲಿಕೆ.

ವಿನಯ್ ರಾಜಾವತ್
author img

By

Published : Apr 6, 2019, 8:12 PM IST

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ಒಂದು ರೂ. ನಾಣ್ಯವನ್ನು ಸೇರಿಸಿ 12.500 ರೂ.ಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಚುನಾವಣಾ ಶುಲ್ಕ ಕಟ್ಟುವ ಮೂಲಕ ಡಿಫರೇಟ್ ಆಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ವಿನಯ್ ನಾಮಪತ್ರ ಸಲ್ಲಿಕೆಯ ವೇಳೆ ಮಲೆನಾಡಿನ ಸ್ಟೈಲ್​ನಲ್ಲಿ ತಲೆಗೆ ಅಡಿಕೆ ಟೋಪಿ, ಪಂಚೆ ತೊಟ್ಟು ಎತ್ತಿನಗಾಡಿಯ ಮೂಲಕ ಆಗಮಿಸಿದರು. ವಿನಯ್ ರಾಜಾವತ್ ನಾಮಪತ್ರ ಸಲ್ಲಿಕೆಯ ವೇಳೆ ಇಬ್ಬರು ಅಂಧರ ಜೊತೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನು ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯ ಸ್ಪರ್ಧೆಗಾಗಿ ಕಟ್ಟುಲು ಒಂದೂಂದು ರೂಪಾಯಿಗಳನ್ನು ಸೇರಿಸಿ 12.500 ರೂ.ಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಚುನಾವಣಾ ಶುಲ್ಕ ಕಟ್ಟಿದ್ದು ವಿಶೆಷವಾಗಿತ್ತು.

ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್

ವಿನಯ್ ರಾಜಾವತ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪನವರ ಎದುರು ಸಹ ಸ್ಪರ್ಧೆ ಮಾಡಿದ್ದರು. ಈ ವೇಳೆ ಹೆಲಿಕಾಪ್ಟರ್​ನಲ್ಲಿ ಬಂದು ನಾಮಪತ್ರ ಸಲ್ಲಿಸಿ ರಾಜ್ಯಾದ್ಯಾಂತ ಸುದ್ದಿಯಾಗಿದ್ದರು. ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳುತ್ತಾ ಕೇವಲ 400 ಮತಗಳನ್ನು ಗಳಿಸಿದ್ದರು.‌ ಈಗ ಮತ್ತೆ ಭ್ರಷ್ಟಾಚಾರ ತೊಲಗಿಸಲು ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವುದಾಗಿ ವಿನಯ್ ತಿಳಿಸಿದ್ದಾರೆ.

Intro:ಯಾವುದೇ ಚುನಾವಣೆ ಇರಲಿ..ಅಲ್ಲಿ ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಅದೇ ರೀತಿ ಶಿವಮೊಗ್ಗದ ಲೋಕಸಭ ಚುನಾವಣೆಗೆ ಸ್ಪರ್ಧೆ ಮಾಡಿರುವ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ರವರು ತಮ್ಮ ನಾಮಪತ್ರ ಸಲ್ಲಿಕೆಯ ವೇಳೆಯೆ ಡಿಫರೇಟ್ ಆಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿನಯ್ ನಾಮಪತ್ರ ಸಲ್ಲಿಕೆಯ ವೇಳೆ ವಿನಯ್ ಮಲೆನಾಡಿನ ಸ್ಟೈಲ್ ನಲ್ಲಿ ತಲೆಗೆ ಅಡಿಕೆ ಟೋಪಿ, ಪಂಚೆ ತೂಟ್ಟು ಎತ್ತಿನಗಾಡಿಯ ಮೂಲಕ ಆಗಮಿಸಿದರು.

Body:ವಿನಯ್ ರಾಜಾವತ್ ರವರು ನಾಮಪತ್ರ ಸಲ್ಲಿಕೆಯ ವೇಳೆ ಐವರು ಚುನಾವಣಾಧಿಕಾರಿಗಳ ಬಳಿ ಹೋಗುವಾಗ ಇಬ್ಬರು ಅಂಧರ ಜೊತೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನೂ ಎಲ್ಲಾದಕ್ಕಿಂತ ಮುಖ್ಯವಾಗಿ ಚುನಾವಣೆಯ ಸ್ಪರ್ಧೆಗಾಗಿ ಕಟ್ಟುಲು ಒಂದೂಂದು ರೂಪಾಯಿಗಳನ್ನು ಸೇರಿಸಿ 12.500 ರೂಗಳನ್ನು ಒಂದು ಚೀಲದಲ್ಲಿ ಹಾಕಿ ಕೊಂಡು ಬಂದು ಚುನಾವಣಾ ಶುಲ್ಕ ಕಟ್ಟಲಾಯಿತು. ಈ ಮೂಲಕ ಚುನಾವಣಾಧಿಕಾರಿಗಳಿಗೂ ಸಹ ಒಂದು ರೀತಿಯಲ್ಲಿ ಕೆಲ್ಸ ನೀಡಿದ್ದಾರೆ.

Conclusion:ಕಳೆದ ವಿಧಾನಸಭ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪನವರ ಎದುರು ಸಹ ಸ್ಪರ್ಧೆ ಮಾಡಿದ್ದರು. ಈ ವೇಳೆ ಹೆಲಿಕಾಪ್ಟರ್ ನಲ್ಲಿ ಬಂದು ನಾಮಪತ್ರ ಸಲ್ಲಿಸಿ ರಾಜ್ಯಾದ್ಯಾಂತ ಹೆಸರುಗಳಿಸಿದ್ದರು. ತಾನು ಗೆದ್ದೆ ಗೆಲ್ಲುತ್ತೆನೆ ಎಂದು ಹೇಳುತ್ತಾ ಕೇವಲ 400 ಮತಗಳನ್ನು ಗಳಿಸಿದ್ದರು.‌ಈಗ ಮತ್ತೆ ಭ್ರಷ್ಟಚಾರ ತೂಲಗಿಸಲು ನಾನು ಲೋಕಸಭ ಚುನಾವಣೆಗೆ ಸ್ಪರ್ಧೆ ಮಾಡಿರುವುದಾಗಿ ವಿನಯ್ ತಿಳಿಸಿದ್ದಾರೆ. ಆದ್ರೆ, ಕೆಲವರು ಚುನಾವಣೆಯಲ್ಲಿ ಸ್ಪರ್ಧೆಯ ಮೂಡುವುದು ಹೆಸರುಗಳಿಸಲು ಮಾತ್ರ ಎಂಬಂತೆ ಆಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.