ETV Bharat / state

ಆರೋಗ್ಯದ ಮೂಲವೇ ಯೋಗ: ವಿನಯ್ ಗುರೂಜಿ - shivamogga

ಯೋಗ ದಿನಾಚರಣೆ ಒಂದು ದಿನಕ್ಕೆ ಸಿಮೀತವಾಗದೆ ಪ್ರತಿನಿತ್ಯ ನಿಮ್ಮ ಜೀವನದ ಒಂದು ಕಾಯಕವಾಗಲಿ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.

Vinay Guruji
ಗೌರಿಗದ್ದೆಯ ವಿನಯ್ ಗುರೂಜಿ
author img

By

Published : Jun 21, 2021, 2:01 PM IST

ಶಿವಮೊಗ್ಗ: ಆರೋಗ್ಯದ ಮೂಲವೇ ಯೋಗ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು. ಯೋಗ ದಿನಾಚರಣೆಯ ಅಂಗವಾಗಿ ನಗರದ ಶಿವಗಂಗಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೌರಿಗದ್ದೆಯ ವಿನಯ್ ಗುರೂಜಿ

ಆರೋಗ್ಯದ ಮೂಲವೇ ಯೋಗ. ಎಲ್ಲಾ ರೋಗಕ್ಕೂ ಯೋಗ ಮದ್ದು. ಹಾಗಾಗಿ ಇಂದು ಇಡೀ ವಿಶ್ವದ ಜನ ಯೋಗ ಮಾಡುತ್ತಿದ್ದಾರೆ. ಪ್ರತಿ ದಿನ ಯೋಗವನ್ನು ಮಾಡುವ ಮೂಲಕ ರೋಗದಿಂದ ದೂರ ಇರಬಹುದು. ಹಾಗಾಗಿಯೇ ಇಂದು ಭಾರತ ಯೋಗದಿಂದ ವಿಶ್ವಗುರು ಆಗಿದೆ ಎಂದರು.

ಜನರಿಗೆ ಒಳ್ಳೆಯದನ್ನು ಬಯಸುವುದು ಕೂಡ ಯೋಗವೇ. ಯೋಗ ದಿನಾಚರಣೆ ಒಂದು ದಿನಕ್ಕೆ ಸಿಮೀತವಾಗದೆ, ಪ್ರತಿನಿತ್ಯ ನಿಮ್ಮ ಜೀವನದ ಒಂದು ಕಾಯಕವಾಗಲಿ ಎಂದು ವಿನಯ್ ಗುರೂಜಿ ಹೇಳಿದರು.

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ- ಸಚಿವ ಕೆ.ಎಸ್ ಈಶ್ವರಪ್ಪ

ಸಚಿವ ಕೆ.ಎಸ್ ಈಶ್ವರಪ್ಪ

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ‌.ಎಸ್. ಈಶ್ವರಪ್ಪ ಹೇಳಿದರು. ಇಂದು ವಿಶ್ವಾದ್ಯಂತ ಯೋಗ ದಿನಾಚರಣೆಯನ್ನು ಮಾಡಲಾಗುತ್ತಿದೆ. ಅದರಂತೆ ಶಿವಮೊಗ್ಗ ನಗರ ಬಿಜೆಪಿ ಹಾಗೂ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಚಿವರು ಯೋಗಾಭ್ಯಾಸ ಮಾಡುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ. ಯೋಗ ಭಾರತದ ಸಂಸ್ಕೃತಿ ಹಾಗಾಗಿ ಇಂದು ಯೋಗ ವಿಶ್ವವನ್ನು ಒಗ್ಗೂಡಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಕ್ಕಿ‌ನಕಲ್ಮಟದ ಮುರುಘರಾಜೇಂದ್ರ ಸ್ವಾಮಿಗಳು, ಸಚಿವ ಕೆ‌.ಎಸ್.ಈಶ್ವರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಸ್ ಅರುಣಾದೇವಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ದೈಹಿಕ ಶಿಕ್ಷಕಿ ನೀಡಿದ ಪ್ರೋತ್ಸಾಹದ ಫಲ: ಉತ್ತಮ ಯೋಗಪಟುವಾಗಿ ರೂಪುಗೊಂಡ ಯುವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.