ETV Bharat / state

ನಾಟಿ ವೈದ್ಯರ ಹೆಸರಲ್ಲಿ ನಕಲಿ ಔಷಧ : ಗ್ರಾಮಸ್ಥರಿಂದ ನಕಲಿಗಳ ಮೇಲೆ ದಾಳಿ ಪ್ರತಿಭಟನೆ - ನಾಟಿ ವೈದ್ಯ ನಾರಾಯಣ ಮೂರ್ತಿ ಹೆಸರಲ್ಲಿ ನಕಲಿ ಔಷಧಿ

ಶಿವಮೊಗ್ಗದ ಶಿಕಾರಿಪುರದಲ್ಲಿ ನಾಟಿ ವೈದ್ಯ ನಾರಾಯಣ ಮೂರ್ತಿ ಹೆಸರಿನಲ್ಲಿ ನಕಲಿ ಔಷಧ ನೀಡುತ್ತಿದ್ದವರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದು, ಅವರ ಬಳಿ ಔಷಧಿ ಪಡೆಯಲು ಬರುವವರನ್ನು ತಡೆದು ಪ್ರತಿಭಟನೆ ನಡೆಸಿದರು.

ನಾಟಿ ವೈದ್ಯ ನಾರಾಯಣ ಮೂರ್ತಿ ಹೆಸರಲ್ಲಿ ನಕಲಿ ಔಷಧ ನೀಡಿಕೆ
Villagers protest against who gives fake medicine in the name of narayan murthy
author img

By

Published : Mar 8, 2020, 5:29 PM IST

ಶಿವಮೊಗ್ಗ: ನಾಟಿ ವೈದ್ಯ ನರಸೀಪುರದ ನಾರಾಯಣ ಮೂರ್ತಿ ಹೆಸರಿನಲ್ಲಿ ನಕಲಿ ಔಷಧ ನೀಡುತ್ತಿದ್ದವರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದು, ಅವರ ಬಳಿ ಔಷಧಿ ಪಡೆಯಲು ಬರುವವರನ್ನು ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಿಂದ ಪ್ರತಿಭಟನೆ

ಜಿಲ್ಲೆಯ ಶಿಕಾರಿಪುರದ ನಾಟಿ ವೈದ್ಯ ನಾರಾಯಣ ಮೂರ್ತಿಯವರು ಗಿಡ ಮೂಲಿಕೆಯ ಔಷಧಿಗಳನ್ನು ನೀಡುವ ಮೂಲಕ ರೋಗಗನ್ನು ನಿವಾರಣೆ ಮಾಡುವುದರಲ್ಲಿ ಪರಿಣಿತಿಯನ್ನು ಹೊಂದಿದ್ದು, ಪ್ರಸಿದ್ಧಿಯನ್ನು ಪಡೆದಿದ್ದಾರೆ. ಆದರೆ ರಾಜ್ಯದ ಜನರಲ್ಲಿ ಕೊರೋನಾ ವೈರಸ್​ ಭೀತಿ ಹೆಚ್ಚಾಗಿದ್ದು, ಬೇರೆ ಬೇರೆ ರಾಜ್ಯಗಳಿಂದ ಜನರು ಇವರ ಬಳಿ ಔಷಧಿ ಪಡೆಯಲು ಬರುತ್ತಾರೆ. ಇದರಿಂದ ಅಸ್ವಚ್ಛತೆ ಉಂಟಾಗುತ್ತಿದ್ದು, ಜನ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ರಸ್ತೆ ತಡೆ ನಡೆಸಿ ಇಲ್ಲಿಗೆ ಬರುತ್ತಿದ್ದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಇಲ್ಲಿಗೆ ಬರುವವರಲ್ಲಿ ಕೊರೋನಾ ವೈರಸ್​ ಹರಡಿದ್ದರೆ ಎಂಬ ಭಯದಿಂದ ಗ್ರಾಮಸ್ಥರು ಔಷಧಿ ನೀಡದಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿಯವರು ಔಷಧಿ ಕೊಡುವುದನ್ನು ನಿಲ್ಲಿಸಿದ್ದರು. ಆದರೆ ನಾರಾಯಣ ಮೂರ್ತಿಯವರ ಹೆಸರಿನಲ್ಲಿ ಬೇರೆಯವರು ನಕಲಿ ಔಷಧಿ ನೀಡುತ್ತಿದ್ದ ಕುರಿತು ಗ್ರಾಮಸ್ಥರಿಗೆ ಮಾಹಿತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಕಲಿ ಔಷಧಿ ನೀಡುವವರ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.