ETV Bharat / state

ವಸತಿ ಶಾಲೆಯಲ್ಲಿ ಕ್ವಾರಂಟೈನ್​ಗೆ ಗ್ರಾಮಸ್ಥರ ವಿರೋಧ.. ಬಸ್​ಗೆ ಕಲ್ಲು ತೂರಾಟ

ಪೊಲೀಸರು ಗ್ರಾಮಸ್ಥರಿಗೆ ಎಷ್ಟೇ ಮನವೊಲಿಸಿದರೂ ತಮ್ಮ ಪಟ್ಟು ಬಿಡದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪೊಲೀಸರು ಬಸ್​ನಲ್ಲಿದ್ದ 12 ಜನರನ್ನು ಕ್ವಾರಂಟೈನ್ ಮಾಡಿದರು. ಈ ವೇಳೆ ಕಿಡಿಗೇಡಿಗಳು ಬಸ್​ಗೆ ಕಲ್ಲು ತೂರಿದ್ದಾರೆ.

Villagers opposition
ಗ್ರಾಮಸ್ಥರ ವಿರೋಧ
author img

By

Published : May 12, 2020, 10:09 AM IST

ಶಿವಮೊಗ್ಗ : ಬೇರೆ ರಾಜ್ಯದಿಂದ ಶಿವಮೊಗ್ಗಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ಗ್ರಾಮಸ್ಥರು ವಿರೋಧ ಮಾಡಿ ಬಸ್​ಗೆ ಕಲ್ಲು ತೂರಿರುವ ಘಟನೆ ಮೇಲಿನ ಹನಸನವಾಡಿ ಗ್ರಾಮದಲ್ಲಿ ನಡೆದಿದೆ.

ಬೇರೆ ರಾಜ್ಯದಿಂದ ಬಂದವರನ್ನು 14 ದಿನ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಗರ ಪ್ರದೇಶದಿಂದ ಹೊರಭಾಗದ ವಸತಿ ಶಾಲೆಗಳನ್ನು ಗುರುತಿಸಿದೆ. ಆದರೆ, ಅಲ್ಲಿಗೆ ಕ್ವಾರಂಟೈನ್​ಗೆ ಕರೆ ತಂದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆಯಲ್ಲಿ ಕ್ವಾರಂಟೈನ್​ಗೆ ಗ್ರಾಮಸ್ಥರ ವಿರೋಧ..

ಅವರನ್ನು ಬೇರೆ ಕಡೆ ಕರೆದು ಕೊಂಡು ಹೋಗಿ, ನಮ್ಮೂರಲ್ಲಿ ಅವರು ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಕೇರಳ ರಾಜ್ಯದಿಂದ ಬಂದ ಜಿಲ್ಲೆಯವರನ್ನು ನಿಯಮದ ಪ್ರಕಾರ 14 ದಿನಗಳ ಕ್ವಾರಂಟೈನ್ ಮಾಡಬೇಕಿದೆ. ಆದರೆ, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಗ್ರಾಮಸ್ಥರಿಗೆ ಎಷ್ಟೇ ಮನವೊಲಿಸಿದರೂ ತಮ್ಮ ಪಟ್ಟು ಬಿಡದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪೊಲೀಸರು ಬಸ್​ನಲ್ಲಿದ್ದ 12 ಜನರನ್ನು ಕ್ವಾರಂಟೈನ್ ಮಾಡಿದರು. ಈ ವೇಳೆ ಕಿಡಿಗೇಡಿಗಳು ಬಸ್​ಗೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಬಸ್​ನ ಹಿಂಬದಿಯ ಗಾಜು ಪುಡಿ ಪುಡಿಯಾಗಿದೆ. ನಂತರ ಪೊಲೀಸರು ಗುಂಪು ಸೇರಿದ್ದ ಜನರನ್ನು ಚದುರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.