ETV Bharat / state

ವಿಜಯ ರಾಘವೇಂದ್ರ ಕಾರಿಗೆ ಡೀಸೆಲ್ ಹಾಕಿ ಎಡವಟ್ಟು ಮಾಡಿದ ಪೆಟ್ರೋಲ್ ಬಂಕ್ ಸಿಬ್ಬಂದಿ - ಭದ್ರಾ ಅಭಯಾರಣ್ಯಕ್ಕೆ ಭೇಟಿ ನೀಡಿದ ನಟ

ಭದ್ರಾ ಅಭಯಾರಣ್ಯ ಹಾಗೂ ಜೋಗ್ ಜಲಪಾತ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ.

Vijaya raghvendra car
ವಿಜಯ ರಾಘವೇಂದ್ರ
author img

By

Published : Aug 11, 2020, 1:08 PM IST

Updated : Aug 11, 2020, 1:29 PM IST

ಶಿವಮೊಗ್ಗ: ಜಿಲ್ಲೆಯ ಗಡಿಭಾಗದಲ್ಲಿರುವ ಭದ್ರಾ ಅಭಯಾರಣ್ಯಕ್ಕೆ ದರ್ಶನ್ ಭೇಟಿ ನೀಡಿದ ಬೆನ್ನಲ್ಲೇ ನಟ ವಿಜಯರಾಘವೇಂದ್ರ ಕೂಡಾ ತಮ್ಮ ಕುಟುಂಬ ಸಹಿತ ಭೇಟಿ ನೀಡಿ ಫೋಟೋಗ್ರಫಿ ಮಾಡಿ ಸುಂದರ ಪರಿಸರದಲ್ಲಿ ಎಂಜಾಯ್ ಮಾಡಿದ್ದಾರೆ.

ವಿಜಯ ರಾಘವೇಂದ್ರ ಕಾರನ್ನು ಸರ್ವಿಸ್​​​ಗೆ ಕೊಂಡೊಯ್ಯುತ್ತಿರುವ ಸಿಬ್ಬಂದಿ

ಆದರೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವಾಗ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಪೆಟ್ರೋಲ್ ಬಂಕಿನಲ್ಲಿ ಎಡವಟ್ಟು ಸಂಭವಿಸಿದೆ. ಜೋಗ್ ಜಲಪಾತ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ವಿಜಯ ರಾಘವೇಂದ್ರ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್​​​ ಬಳಿ ತೆರಳಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವ ಬದಲು ವಿಜಯ ರಾಘವೇಂದ್ರ ಅವರನ್ನು ನೋಡಿದ ಖುಷಿಯಲ್ಲಿ ಕಾರಿಗೆ ಡೀಸೆಲ್ ಹಾಕಿದ್ದಾನೆ.

ಆದರೆ ತಾನು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆ ಸಿಬ್ಬಂದಿ ಗಾಬರಿಯಾಗಿದ್ದಾನೆ. ಕೂಡಲೇ ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ವಿಜಯ ರಾಘವೇಂದ್ರ ಬಳಿ ಕ್ಷಮೆ ಯಾಚಿಸಿದ್ದಾರೆ. ಕೂಡಲೇ ಲಾರಿಯಲ್ಲಿ ವಿಜಯ ರಾಘವೇಂದ್ರ ಅವರ ಕಾರನ್ನು ಸರ್ವಿಸ್​​​​​​​ಗೆ ಕಳಿಸಲಾಗಿದೆ. ನಂತರ ಪೆಟ್ರೋಲ್ ಬಂಕ್​​ನವರೇ ವಿಜಯ ರಾಘವೇಂದ್ರ ಹಾಗೂ ಕುಟುಂಬ ಬೆಂಗಳೂರಿಗೆ ತೆರಳಲು ಬೇರೆ ಕಾರಿನ ವ್ಯವಸ್ಥೆ ಮಾಡಿದ್ದಾರೆ.

Last Updated : Aug 11, 2020, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.