ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಪ್ರತಿಭಟನೆ ನಡೆಸಿವೆ.
ವೀರ ಸಾರ್ವಕರ್ ವಿರುದ್ದ ದೊರೆಸ್ವಾಮಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಾರ್ವಕರ್ ಓರ್ವ ದೇಶ ಭಕ್ತ. ಬ್ರಿಟಿಷರ ವಿರುದ್ದ ಹೋರಾಟ ನಡೆಸಿ, ಜೈಲುವಾಸ ಅನುಭವಿಸಿ ದೇಶದಲ್ಲಿ ದೇಶಪ್ರೇಮವನ್ನು ಹುಟ್ಟು ಹಾಕಿದವರು. ಇಂತಹ ಅಪ್ರತಿಮ ದೇಶಪ್ರೇಮಿ, ಹೋರಾಟಗಾರನ ವಿರುದ್ದ ದೊರೆಸ್ವಾಮಿ ಅವರು ಅವಹೇಳನಕಾರಿಯಾಗಿ ಮಾತನಾಡಿ, ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ತಕ್ಷಣ ದೊರೆಸ್ವಾಮಿ ಅವರು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು, ದೊರೆಸ್ವಾಮಿ ಅವರು ಕ್ಷಮೆ ಕೇಳುವ ತನಕ ಅವರ ಮಾಸಿಕ ಪಿಂಚಣಿಯನ್ನು ತಡೆ ಹಿಡಿಯುವಂತೆ ಒತ್ತಾಯಿಸಿದರು.