ಶಿವಮೊಗ್ಗ: ಲಾಕ್ಡೌನ್ನಿಂದಾಗಿ ತರಕಾರಿ, ಹಣ್ಣುಗಳಿಗೆ ತೀವ್ರ ಪರದಾಟ ನಡೆಸುತ್ತಿದ್ದ ನಗರದ ಜನರಿಗಾಗಿ ಹಾಪ್ ಕಾಮ್ಸ್ ವತಿಯಿಂದ ಎಪಿಎಂಸಿ ಮಾರುಕಟ್ಟೆ ಬಳಿ ಅಂಗಡಿ ಆರಂಭಿಸಲಾಗಿದೆ.
ತರಕಾರಿ ಹಾಗೂ ಹಣ್ಣಿಗಾಗಿ ಜನರು ಪರದಾಟ ನಡೆಸದಿರಲಿ ಎಂದು ಜಿಲ್ಲಾಡಳಿತ ತಳ್ಳುವ ಗಾಡಿ ಮೂಲಕ ಮನೆ ಮನೆಗೆ ತರಕಾರಿ ಸರಬರಾಜು ಮಾಡುವ ವ್ಯವಸ್ಥೆ ಮಾಡಿತ್ತು. ಆದರೂ ಜನರು ತರಕಾರಿಗಾಗಿ ಬೆಳಗ್ಗೆ ಎಪಿಎಂಸಿ ಬಳಿ ಮುಗಿಬೀಳುತ್ತಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಪಿಎಂಸಿ ಬಳಿಯೇ ನೂತನವಾಗಿ ಹಾಪ್ ಕಾಮ್ಸ್ನಿಂದ ತರಕಾರಿ ಅಂಗಡಿ ಆರಂಭಿಸಲಾಗಿದೆ.
ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹಾಪ್ ಕಾಮ್ಸ್ ತರಕಾರಿ ಅಂಗಡಿಯನ್ನು ಉದ್ಘಾಟಿಸಿದರು.