ಶಿವಮೊಗ್ಗ: ಶರಾವತಿ ಹಿನ್ನೀರಿನ ಕಾಡೊಳಗಿರುವ ಉರುಳುಗಲ್ಲು ಗ್ರಾಮದವರ ಮೇಲೆ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮದ ಜನರು ಮತ್ತು ರೈತರು ಸೇರಿ ಪ್ರತಿಭಟನಾ ಪಾದಯಾತ್ರೆ ನಡೆಸಿದರು. ಸಾಗರ ತಾಲೂಕು ಉರುಳುಗಲ್ಲು ಗ್ರಾಮದಿಂದ ಕಾರ್ಗಲ್ವರೆಗೆ ಸುಮಾರು 22 ಕಿ.ಮೀ ದೂರ ನಡೆದ ಪಾದಯಾತ್ರೆಯಲ್ಲಿ ಕಾಗೋಡು ಜನಪರ ಹೋರಾಟ ವೇದಿಕೆ ಹಾಗು ಇತರೆ ಸಂಘಟನೆಗಳು ಪಾಲ್ಗೊಂಡಿದ್ದವು.
ಉರುಳುಗಲ್ಲು ಗ್ರಾಮದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕಡಿದ ಆರೋಪದ ಮೇರೆಗೆ ಐವರು ಯುವಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ. ಅರಣ್ಯಾಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡು ಯುವಕರನ್ನು ಜೈಲಿಗೆ ಕಳುಹಿಸಿದ್ದು ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಆಗ್ರಹಿಸಲಾಗಿದೆೆ.
ಇದನ್ನೂ ಓದಿ: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ನಾಳೆ ಶರಾವತಿ ಹಿನ್ನೀರಿನ ಜನತೆಯ ಪಾದಯಾತ್ರೆ