ETV Bharat / state

ಶಿವಮೊಗ್ಗ: ರೌಡಿ ಕೊಲೆಗೈದು ಪೊಲೀಸರಿಗೆ ಶರಣಾದ ಪಿಯುಸಿ ವಿದ್ಯಾರ್ಥಿಗಳು - ಕಲ್ಲು ಎತ್ತಿ ಹಾಕಿ ರೌಡಿಶೀಟರ್ ಕೊಲೆ

ಶಿವಮೊಗ್ಗದಲ್ಲಿ ರೌಡಿಶೀಟರ್​​ ಕೊಲೆಗೀಡಾದ ಘಟನೆ ನಡೆದಿದೆ. ಪಿಯುಸಿ ವಿದ್ಯಾರ್ಥಿಗಳಿಬ್ಬರು ಕೃತ್ಯ ಎಸಗಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.

two-students-killed-rowdy-sheeter-and-surrendered-to-police
ಶಿವಮೊಗ್ಗ: ರೌಡಿ ಕೊಲೆಗೈದು ಪೊಲೀಸರಿಗೆ ಶರಣಾದ ಪಿಯುಸಿ ವಿದ್ಯಾರ್ಥಿಗಳು
author img

By

Published : Aug 3, 2022, 4:29 PM IST

ಶಿವಮೊಗ್ಗ: ಹಣಕ್ಕೆ ಪೀಡಿಸುತ್ತಿದ್ದ ರೌಡಿಶೀಟರ್​​ನನ್ನು ಪಿಯುಸಿ ವಿದ್ಯಾರ್ಥಿಗಳಿಬ್ಬರು ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ರೌಡಿಶೀಟರ್​ ಆಗಿದ್ದ ಇಲ್ಲಿನ ಹೊಸಮನೆ ಬಡಾವಣೆಯ 4ನೇ ತಿರುವಿನ ಕಿರಣ್ ಅಲಿಯಾಸ್ ಪುಚ್ಚಿ ಕಿರಣ್(28) ಎಂಬಾತ ಕೊಲೆಯಾದವ. ಈತನ ತಂದೆ ಮುನಿರಾಜು ಕೂಡ ರೌಡಿಶೀಟರ್ ಆಗಿದ್ದು, ಆತನೂ ಸಹ ಕೊಲೆಯಾಗಿದ್ದ.

ಕಿರಣ್ ಸಾಮಾನ್ಯ ಜನರನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಪಿಯುಸಿ ವಿದ್ಯಾರ್ಥಿಗಳಿಬ್ಬರಿಗೆ ಹಣಕ್ಕಾಗಿ ಸಾಕಷ್ಟು ತೊಂದರೆ ನೀಡಿದ್ದನಂತೆ. ಹಣ ನೀಡಿ ಬೇಸತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಶಿವಮೊಗ್ಗ ಹೊರವಲಯದ ತುಂಗಾ ಮೇಲ್ದಂಡೆ ಕಾಲುವೆ ಬಳಿಯ ಖಾಲಿ ಜಾಗದಲ್ಲಿ ತಲೆಗೆ ಬಾಟಲಿಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ರೌಡಿಶೀಟರ್ ಕೊಲೆ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿಗಳಿಬ್ಬರೂ ಬುಧವಾರ ಬೆಳಗ್ಗೆ ವಿನೋಬನಗರ ಪೊಲೀಸ್ ಠಾಣೆಗೆ ತೆರಳಿ ಶರಣಾದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೈದರಾಬಾದ್ ಜ್ಯುಬಿಲಿ ಹಿಲ್ಸ್​ ಗ್ಯಾಂಗ್​ರೇಪ್ ಪ್ರಕರಣ: ಫೋಟೊ ಡಿಲೀಟ್ ಮಾಡುವಂತೆ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.