ಶಿವಮೊಗ್ಗ: ಸ್ನೇಹಿತನ ಬರ್ತಡೇಗೆ ಹೋಗಿದ್ದ ಗೆಳೆಯರಿಬ್ಬರು ನೀರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.
ತೀರ್ಥಹಳ್ಳಿಯ ತುಂಗಾನದಿಯ ರಾಮಕೊಂಡದ ಬಳಿ ಈಜಲು ಹೋಗಿದ್ದ ಶೃಂಗೇರಿ ತಾಲೂಕಿನ ಕಿರಣ್(17) ಹಾಗೂ ಹೊಸನಗರ ತಾಲೂಕು ಮಾಸ್ತಿಕಟ್ಟೆಯ ನೀಲಕಂಠ(17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ವಿದ್ಯಾರ್ಥಿಗಳು.
ಓದಿ: ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದ ರೈತ ಮುಖಂಡರು!
ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮಾಡಿರುವ ಇತರೆ ಗೆಳೆಯರು ವಾಪಸ್ ಆಗಿದ್ದಾರೆ. ಆದರೆ ಕಿರಣ್ ಹಾಗೂ ನೀಲಕಂಠ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.