ETV Bharat / state

ಇಬ್ಬರಲ್ಲಿ ಕೊರೊನಾ ಸೋಂಕು.. ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಕಡೆ ಸೀಲ್‌ಡೌನ್ - ಸೀಲ್ ಡೌನ್

ಸೋಂಕಿತರನ್ನು ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಳಕೊಪ್ಪದಲ್ಲಿ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಸ್ಥಳೀಯರಲ್ಲಿ ಆಂತಕವಿದೆ..

Seal down
Seal down
author img

By

Published : Jun 27, 2020, 7:46 PM IST

ಶಿವಮೊಗ್ಗ: ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಹಳ್ಳೂರು ಹಕ್ಕಲು ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದೇ ರೀತಿ ಹಳ್ಳೂರು ಹಕ್ಕಲಿಗೆ ನಿನ್ನೆ ಬೆಂಗಳೂರಿನಿಂದ ಆಗಮಿಸಿದ್ದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಸೀಲ್‌ಡೌನ್ ಮಾಡಲಾಗಿದೆ.

ಇದರಿಂದ ಮಹಿಳೆ ವಾಸವಿದ್ದ ಮನೆ ಹಾಗೂ ಏರಿಯಾದಲ್ಲಿ ಸ್ಯಾನಿಟೈಸ್​ ಮಾಡಲಾಗಿದೆ. ಶಿಕಾರಿಪುರ ತಹಶೀಲ್ದಾರ್ ಕವಿರಾಜ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಶಿರಾಳಕೊಪ್ಪ ಪಟ್ಟಣ ಪಂಚಾಯತಿ ಸಿಬ್ಬಂದಿ ಜತೆಗೆ‌ ಸೇರಿ ಸೀಲ್ ಮಾಡಿದ್ದಾರೆ.

ಸೋಂಕಿತರನ್ನು ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಳಕೊಪ್ಪದಲ್ಲಿ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಸ್ಥಳೀಯರಲ್ಲಿ ಆಂತಕವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.