ETV Bharat / state

ಬಾರ್ ಹೊರಗೆ ನಿಂತಿದ್ದ ಗೆಳೆಯರಿಬ್ಬರಿಗೆ ಚಾಕು ಇರಿತ: ಓರ್ವ ಸಾವು - one person was death

ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಶಿವಮೊಗ್ಗದ ಸುಂದರ ಆಶ್ರಯ ಬಾರ್ ಪಕ್ಕದ‌ ಶ್ರೀನಿವಾಸ ದೇವಾಲಯದ ಬಳಿ ಗೆಳಯರಾದ ಜೀವನ್ ಹಾಗೂ ಕೇಶವ್ ಸೇಠ್​ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಬಂದ ನಾಲ್ಕೈದು ಜನ ಅವರಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.

ಚಾಕು ಇರಿತ
ಚಾಕು ಇರಿತ
author img

By

Published : Jan 28, 2021, 7:04 AM IST

Updated : Jan 28, 2021, 8:15 AM IST

ಶಿವಮೊಗ್ಗ: ಬಾರ್ ಹೊರಗೆ ಕುಡಿದು ನಿಂತಿದ್ದ ಗೆಳೆಯರಿಬ್ಬರಿಗೆ ಚಾಕು ಇರಿತವಾಗಿರುವ ಘಟನೆ ಜಿಲ್ಲೆಯ ಎನ್.ಟಿ. ರಸ್ತೆ ಸುಂದರ ಆಶ್ರಯ ಬಾರ್ ಬಳಿ ನಡೆದಿದೆ.

ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಸುಂದರ ಆಶ್ರಯ ಬಾರ್ ಪಕ್ಕದ‌ ಶ್ರೀನಿವಾಸ ದೇವಾಲಯದ ಬಳಿ ಗೆಳಯರಾದ ಜೀವನ್ ಹಾಗೂ ಕೇಶವ್ ಶೆಟ್ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಬಂದ ನಾಲ್ಕೈದು ಜನ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಓದಿ:ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು: ಜೈಲಿಗಟ್ಟಿದ ಪೊಲೀಸರು

ಇದರಲ್ಲಿ ಜೀವನ್ (27) ಮೃತಪಟ್ಟಿದ್ದು, ಕೇಶವ್ ಸೇಠ್​ (28) ಸ್ಥಿತಿ ಗಂಭೀರವಾಗಿದೆ. ಜೀವನ್​​ ಡ್ಯಾನ್ಸ್ ಮಾಸ್ಟರ್ ವೃತ್ತಿ ನಡೆಸುತ್ತಿದ್ದರು. ಕೇಶವ್‌ ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮೇಲಿನ ಚಾಕು ಇರಿತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರದ್ಯಾಂತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Last Updated : Jan 28, 2021, 8:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.