ETV Bharat / state

ಶಿವಮೊಗ್ಗ: ಜೋಳದ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆ ಸಾವು

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಜೋಳದ ಹೊಲದಲ್ಲಿ ಅಳವಡಿಸಿದ್ದ ವಿದ್ಯುತ್​ ತಂತಿ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ.

two-elephants-died-by-an-electric-shock
ಜೋಳದ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆ ಸಾವು
author img

By

Published : Sep 25, 2022, 5:03 PM IST

ಶಿವಮೊಗ್ಗ: ಜೋಳದ ಹೊಲದಲ್ಲಿ ಹಾಕಿದ್ದ ಐಬಕ್ಸ್ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಚನ್ನಹಳ್ಳಿಯ ಆನೆಸರದಲ್ಲಿ ನಡೆದಿದೆ.

ಚನ್ನಹಳ್ಳಿಯ ಚಂದ್ರನಾಯ್ಕ ಎಂಬುವರು ಬಗರ್ ಹುಕುಂ ಸಾಗುವಳಿ‌ ಮಾಡುತ್ತಿದ್ದ ಜೋಳದ ಹೊಲಕ್ಕೆ ಐಬಕ್ಸ್ ವಿದ್ಯುತ್​ ಸಂಪರ್ಕ ನೀಡಿದ್ದರು. ಇವರ ಜಮೀನು ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದರಿಂದ ವಿದ್ಯುತ್​ ತಂತಿ ತಗುಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಸುಮಾರು 12 ವರ್ಷದ ಎರಡು ಕಾಡಾನೆಗಳು ಎಂದು ತಿಳಿದುಬಂದಿದೆ. ಈ ಕಾಡಾನೆಗಳು ಭದ್ರಾ ಅರಣ್ಯದಿಂದ ವಲಸೆ ಬಂದಿದ್ದವು ಎಂದು ಹೇಳಲಾಗ್ತಿದೆ.

ಸ್ಥಳಕ್ಕೆ ಆಯನೂರು ಅರಣ್ಯಾಧಿಕಾರಿಗಳು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದು, ಚಂದ್ರನಾಯ್ಕರನ್ನು ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ವಿಜಯಪುರ: ಹೊಲಕ್ಕೆ ನೀರು ಹಾಯಿಸಲು ಹೋಗಿ ಇಬ್ಬರು ಸಹೋದರರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.