ETV Bharat / state

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ, ಇಬ್ಬರು ಸಾವು - ಹೋರಿ ಬೆದರಿಸುವ ಸ್ಪರ್ಧೆ

ಶಿಕಾರಿಪುರ ತಾಲೂಕಿನ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸ್ಪರ್ಧೆಗೆ ಕರೆದುಕೊಂಡು ಬರುತ್ತಿದ್ದ ಹೋರಿ ಮಾಲೀಕನ ಕೈಯಿಂದ ತಪ್ಪಿಸಿಕೊಂಡು ಓಡುವಾಗ ದುರಂತ ಘಟಿಸಿತು.

Two died inbull-bullying competition accident
ಹೋರಿ ಬೆದರಿಸುವ ಸ್ಪರ್ಧೆ ಅವಘಡದಲ್ಲಿ ಸಾವನ್ನಪ್ಪಿದವರು
author img

By

Published : Oct 30, 2022, 10:42 AM IST

Updated : Oct 30, 2022, 11:49 AM IST

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ನಡೆದ ಪ್ರತ್ಯೇಕ ಅವಘಡದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಶಿಕಾರಿಪುರ ತಾಲೂಕಿನಲ್ಲಿ ನಡೆಯಿತು. ದೀಪಾವಳಿಯ ನಂತರ ಜಿಲ್ಲೆಯ ಅರೆ ಮಲೆನಾಡು ತಾಲೂಕುಗಳಾದ ಶಿಕಾರಿಪುರ, ಸೊರಬ ಭಾಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಪ್ರಕರಣ -1: ಶಿಕಾರಿಪುರ ತಾಲೂಕಿನ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸ್ಪರ್ಧೆಗೆ ಕರೆದುಕೊಂಡು ಬರುತ್ತಿದ್ದ ಹೋರಿಯೊಂದು ಮಾಲೀಕನ ಕೈಯಿಂದ ತಪ್ಪಿಸಿಕೊಂಡು ಪ್ರಶಾಂತ(36) ಎಂಬವರ ಎದೆಯ ಮೇಲೆ ಕಾಲಿಟ್ಟು ಓಡಿದೆ. ಈ ವೇಳೆ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ, ಇಬ್ಬರು ಸಾವು

ಪ್ರಕರಣ -2: ಸೊರಬ ತಾಲೂಕು ಜಡೆ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಚಗಟೂರು ಗ್ರಾಮ ಆದಿ (20) ಎಂಬ ಯುವಕ ಸಾವನ್ನಪ್ಪಿದ್ದಾನೆ. ಓಡುತ್ತಿದ್ದ ಹೋರಿ ತನ್ನ ಕೊಂಬಿನಿಂದ ತಿವಿದು ಘಟನೆ ನಡೆಯಿತು. ಈ ರೀತಿಯ ಅವಘಡಗಳಿಂದ ಈ ಸ್ಪರ್ಧೆಗೆ ಜಿಲ್ಲಾಡಳಿತ ನಿರ್ಬಂಧ ಹಾಕಿತ್ತು.

ಇದನ್ನೂ ಓದಿ: ಮೈಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು

Last Updated : Oct 30, 2022, 11:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.