ETV Bharat / state

ತುಂಗಾನದಿಯಲ್ಲಿ ಬಾಂಬ್‌ ಸ್ಫೋಟ ಪ್ರಯೋಗ ಪ್ರಕರಣ: ತೀರ್ಥಹಳ್ಳಿಯ ನಾಲ್ವರಿಗೆ ಎನ್‌ಐಎ ನೊಟೀಸ್ - ಕುಕ್ಕರ್ ಬಾಂಬ್ ಸ್ಫೋಟ

ತುಂಗಾನದಿಯಲ್ಲಿ ಬಾಂಬ್‌ ಸ್ಫೋಟ ಪ್ರಯೋಗ ನಡೆಸಿರುವ ಪ್ರಕರಣ ಕುರಿತಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ಜಾರಿಗೊಳಿಸಿದೆ.

NIA
NIA
author img

By ETV Bharat Karnataka Team

Published : Oct 18, 2023, 3:31 PM IST

ಶಿವಮೊಗ್ಗ : ತುಂಗಾನದಿ ದಡದ ಮೇಲೆ ಬಾಂಬ್ ಸ್ಫೋಟ ಪ್ರಯೋಗ ನಡೆಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ತೀರ್ಥಹಳ್ಳಿಯ ನಾಲ್ಕು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ತೀರ್ಥಹಳ್ಳಿಯ ಶಾರಿಕ್ ಎಂಬಾತ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದು, ಈತನಿಗೂ ತೀರ್ಥಹಳ್ಳಿಯ ಅರಾಫತ್ ಅಲಿಗೂ ನಂಟಿದೆ ಎಂಬ ಗುಮಾನಿಯ ಮೇರೆಗೆ ವಿದೇಶದಿಂದ ದೆಹಲಿಗೆ ಬಂದವನನ್ನು ತನಿಖಾಧಿಕಾರಿಗಳು ಬಂಧಿಸಿದ್ದರು.

ಬಾಂಬ್ ಸ್ಫೋಟ ಪ್ರಯೋಗ ಹಾಗೂ ತ್ರಿವರ್ಣ ಧ್ವಜ ಸುಟ್ಟು ಹಾಕಿದ ಘಟನೆ ಸೇರಿದಂತೆ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಅರಾಫತ್​ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ತೀರ್ಥಹಳ್ಳಿಯ ನಾಲ್ವರಿಗೆ ಅ.19 ರಂದು ಬೆಂಗಳೂರಿನ ಎನ್ಐಎ ಕಚೇರಿಗೆ ಬರುವಂತೆ ತಿಳಿಸಲಾಗಿದೆ. ಎನ್‌ಐಎ ತಂಡ ಇನ್ನಷ್ಟು‌ ಜನರನ್ನು ವಿಚಾರಣೆಗೆ ಒಳಪಡಿಸಲು ಸಿದ್ದತೆ ನಡೆಸಿದೆ. ಈ ಹಿಂದೆ ಹರ್ಷ ಎಂಬವರ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ನಗರದ 20ಕ್ಕೂ‌ ಹೆಚ್ಚು ಮಂದಿಯನ್ನು ಎನ್‌ಐಎ ವಿಚಾರಣೆಗೆ ಕರೆಸಿಕೊಂಡಿತ್ತು.

ಅರಾಫತ್​ ಅಲಿ ದೆಹಲಿಯಲ್ಲಿ ಬಂಧನ: ಕರ್ನಾಟಕದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು ನಡೆಸಿದ್ದ ಕಿಂಗ್​ಪಿನ್​ ಹಾಗು ಇಸ್ಲಾಮಿಕ್​ ಸ್ಟೇಟ್ ​(ಐಎಸ್​) ಉಗ್ರ ಸಂಘಟನೆಗೆ ಸೇರಿದ್ದ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಪೊಲೀಸರು ದೆಹಲಿಯಲ್ಲಿ (ಸೆಪ್ಟೆಂಬರ್ 14, 2023) ಬಂಧಿಸಿದ್ದರು. ಕೀನ್ಯಾದ ನೈರೋಬಿಯಿಂದ ನವದೆಹಲಿಗೆ ವಿಮಾನದಲ್ಲಿ ಆಗಮಿಸಿದಾಗ ನಿಲ್ದಾಣದಲ್ಲೇ ಸೆರೆ ಹಿಡಿಯಲಾಗಿತ್ತು.

ಅರಾಫತ್ ಅಲಿ ನೇರವಾಗಿ ಯಾವುದೇ ದಾಳಿಗಳಲ್ಲಿ ಭಾಗಿಯಾಗಿಲ್ಲ. ಆದರೆ ಆತ ವಿದೇಶದಲ್ಲಿದ್ದುಕೊಂಡು ದೇಶದಲ್ಲಿ ನಡೆಯುವ ಭಯೋತ್ಪಾದಕ ಸಂಚುಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದನು. ವಿದೇಶದಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಎಂಬುದನ್ನು ಎನ್​ಐಎ ಪತ್ತೆ ಮಾಡಿದೆ.

ತೀರ್ಥಹಳ್ಳಿ ಮೂಲದವನಾದ ಈತ, ಭಯೋತ್ಪಾದಕ ಚಟುವಟಿಕೆಯ ಕಿಂಗ್‌ಪಿನ್​ ಆಗಿರುವ ಅರಾಫತ್ ಅಲಿ 2020ರಿಂದ ಭಾರತದಿಂದ ತಪ್ಪಿಸಿಕೊಂಡು ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜತೆಗೆ ನಾಪತ್ತೆಯಾಗಿದ್ದ. ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಭಯೋತ್ಪಾದಕ ಕೃತ್ಯಗಳಿಗೆ ವಿದೇಶದಲ್ಲೇ ಸಂಚು ರೂಪಿಸುತ್ತಿದ್ದ ಎಂದು ತಿಳಿದುಬಂದಿತ್ತು.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮದ್​ ಶಾರಿಕ್ ಹಾಗೂ ಮಾಜ್ ಮುನೀರ್​ಗೆ ವಿದೇಶದಿಂದ ಹಣಕಾಸಿನ ನೆರವನ್ನು ಅರಾಫತ್ ಅಲಿ ನೀಡಿದ್ದಾನೆ. ಆ ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್​ನಲ್ಲಿ ಶಾರಿಕ್ ಸಿಕ್ಕಿಬಿದ್ದಿದ್ದ. ಕದ್ರಿಯಲ್ಲಿ ಆಕ್ಷೇಪಾರ್ಹ ಗೋಡೆ ಬರಹ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು.

ಐಸಿಸ್​ಗೆ ಯುವಕರ ಸೇರ್ಪಡೆ: ಉಗ್ರ ಅರಾಫತ್​ ಅಲಿ, ಯುವಕರನ್ನು ಗುರುತಿಸಿ ಉಗ್ರ ಸಂಘಟನೆ ಐಸಿಸ್​ಗೆ ಸೇರಿಸುವ ಕೆಲಸ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಭಯೋತ್ಪಾದನೆ ಸಂಚು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್​ ಬ್ಲಾಸ್ಟ್​ ಪ್ರಕರಣಗಳ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಸಂಚಿನ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿದ್ದನು. ಪ್ರಕರಣದಲ್ಲಿ ಬಂಧಿತನಾದ ಅಲಿ ಮತ್ತು ಇತರ ಶಂಕಿತರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಎನ್​ಐಎ ತಿಳಿಸಿತ್ತು.

ಇದನ್ನೂ ಓದಿ: ತೀರ್ಥಹಳ್ಳಿಯಲ್ಲಿ ಇಡಿ ದಾಳಿ: ಶಂಕಿತ ಉಗ್ರ ಶಾರೀಕ್ ಸೇರಿ ಮೂವರ ಮನೆಗಳಲ್ಲಿ ಮುಂದುವರೆದ ಶೋಧ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.