ETV Bharat / state

ಕಾವೇರಿ ಆಯ್ತು ಈಗ ತುಂಗಾ ಡ್ಯಾಂನಲ್ಲೂ ತಳ ಸೇರಿದ ನೀರು.. ಕಾದಿದೆ ಗಂಡಾಂತರ!

author img

By

Published : Jun 1, 2019, 8:50 AM IST

ಶಿವಮೊಗ್ಗ ಸುಮಾರು 3.60 ಲಕ್ಷ ಜನಸಂಖ್ಯೆ ಇರೋ ನಗರ. ಇಲ್ಲಿನ ಜನ ದಿನನಿತ್ಯದ ಬಳಕೆಗೆ ಹಾಗೂ ಕುಡಿಯುವ ನೀರಿಗೆ ತುಂಗಾ ಡ್ಯಾಂ ನೀರನ್ನೇ ಆಶ್ರಯಿಸಿದ್ದಾರೆ. ಆದರೆ ವಿಪರೀತ ಬೇಸಿಗೆ ಪರಿಣಾಮ ಡ್ಯಾಂನ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ.

ತಳ ಸೇರಿದ ತುಂಗಾ ಡ್ಯಾಂ ನೀರಿನ ಮಟ್ಟ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಗಾ ಡ್ಯಾಂನ ನೀರಿನ ಮಟ್ಟ ಇದೀಗ ಡೆಡ್​ ಸ್ಟೋರೇಜ್​ ಹಂತಕ್ಕೆ ತಲುಪಿದ್ದು, ಸದ್ಯದಲ್ಲೆ ನಗರಕ್ಕೆ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಸುಮಾರು 3.60 ಲಕ್ಷ ಜನಸಂಖ್ಯೆ ಇರೋ ನಗರ. ನಗರವು ದಿನನಿತ್ಯದ ಬಳಕೆಗೆ ಹಾಗೂ ಕುಡಿಯುವ ನೀರಿಗೆ ತುಂಗಾ ಡ್ಯಾಂ ನೀರನ್ನೇ ಆಶ್ರಯಿಸಿದೆ. ಆದರೆ ವಿಪರೀತ ಬೇಸಿಗೆ ಪರಿಣಾಮ ಡ್ಯಾಂನ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ.

ತಳ ಸೇರಿದ ತುಂಗಾ ಡ್ಯಾಂ ನೀರಿನ ಮಟ್ಟ

ಮುಂಗಾರು ಮಳೆ ಬರೋದು ತಡವಾಗಿದೆ. ಡ್ಯಾಂನ ನೀರಿನ ಮಟ್ಟ ಡೆಡ್​ ಸ್ಟೋರೇಜ್​ ತಲುಪಿರುವುದರಿಂದ ಇರುವ ನೀರಿನಲ್ಲೇ ನಾವು ಇನ್ನು ಒಂದು ತಿಂಗಳ ಕಾಲ ಮಾತ್ರ ಸಂಭಾಳಿಸಬಹುದು. ನಗರಕ್ಕೆ ಕುಡಿಯಲು ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾವು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕುಡಿಯಲು ಬಿಟ್ಟು ಬೇರೆ ಯಾವುದೇ ಕಾರಣಗಳಿಗೆ ನಾವು ಡೆಡ್​ ಸ್ಟೋರೇಜ್​ ನೀರನ್ನು ಬಳಸುವ ಹಾಗಿಲ್ಲ. ಜಿಲ್ಲಾಡಳಿತ ಕೂಡಾ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆದೇಶ ಮಾಡಿದೆ ಎಂದು ಡ್ಯಾಂನ ಕಾರ್ಯಾಕಾರಿ ಅಭಿಯಂತರ ರಮೇಶ್​ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.

ನೀರಿನ ಅಭಾವದ ಕಾರಣ ನಗರದ ಹೊರಗಿನ ಕೆಲ ವಾರ್ಡ್​ಗಳಿಗೂ ಕೂಡಾ ಕುಡಿಯಲು ನೀರು ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಕೂಡಾ ಕೃಷಿ ಚಟುವಟಿಕೆಗಳಿಗೆ ನೀರು ಬಿಡದಂತೆ ಆದೇಶ ಮಾಡಿದೆ. ಅಲ್ಲದೆ ಮೊದಲ ಆದ್ಯತೆಯಾಗಿ ಜನರಿಗೆ ಕುಡಿಯುವುದಕ್ಕಾಗಿ ಮಾತ್ರ ನೀರು ಪೂರೈಸಲು ಹೇಳಿದೆ ಎಂದು ರಮೇಶ್​ ತಿಳಿಸಿದ್ದಾರೆ.

ಈಗ ಮಳೆ ತಡವಾಗಿದೆ. ಇಂತಹ ಸ್ಥಿತಿಯನ್ನು ನಾವು 3-4 ವರ್ಷಗಳಿಂದ ಎದುರಿಸುತ್ತಿದ್ದೇವೆ ಅಂತಾ ನೀರು ಪೂರೈಕೆ ಮಾಡುವ ಟ್ಯಾಂಕರ್​ ಮಾಲೀಕ ತಿಮ್ಮೇಗೌಡ ಎಂಬುವರು ಹೇಳಿದ್ದಾರೆ.

ಅಲ್ಲದೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಕೂಡಾ ಕುಡಿಯುವ ನೀರಿನ ಲಭ್ಯತೆಯನ್ನು ನೋಡಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗದ ಗ್ರಾಮೀಣ ಭಾಗಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದಯಾನಂದ ತಿಳಿಸಿದ್ದಾರೆ. ಅಲ್ಲದೆ ಶಿವಮೊಗ್ಗ ನಗರ ತುಂಗಾ ಡ್ಯಾಂ ನೀರಿನ ಮೇಲೆ ಅವಲಂಬಿತವಾಗಿದ್ದು, ಮಳೆ ಚೆನ್ನಾಗಿ ಬರಲಿ ಅಂತಾ ಅವರು ಆಶಿಸಿದ್ದಾರೆ.

Intro:Body:

 ಕಾವೇರಿ ಆಯ್ತು ಈಗ ತುಂಗಾಡ್ಯಾಂನಲ್ಲೂ ತಳ ಸೇರಿದ ನೀರು.. ಕಾದಿದೆ ಗಂಡಾಂತರ!

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಗಾ ಡ್ಯಾಂನ ನೀರಿನ ಮಟ್ಟ ಇದೀಗ ಡೆಡ್​ ಸ್ಟೋರೇಜ್​ ಹಂತಕ್ಕೆ ತಲುಪಿದ್ದು, ಸದ್ಯದಲ್ಲೆ ನಗರ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸುಮಾರು 3.60 ಲಕ್ಷ ಜನಸಂಖ್ಯೆ ಇರೋ ನಗರ ದಿನನಿತ್ಯದ ಬಳಕೆಗೆ ಹಾಗೂ ಕುಡಿಯುವ ನೀರಿಗೆ ತುಂಗಾ ಡ್ಯಾಂ ನೀರನ್ನೇ ಆಶ್ರಯಿಸಿದೆ. ಆದರೆ ವಿಪರೀತ ಬೇಸಿಗೆ ಪರಿಣಾಮ ಡ್ಯಾಂನ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. 

ಮುಂಗಾರು ಮಳೆ ಬರೋದು ತಡವಾಗಿದೆ. ಡ್ಯಾಂನ ನೀರಿನ ಮಟ್ಟ ಡೆಡ್​ ಸ್ಟೋರೇಜ್​ ತಲುಪಿರುವುದರಿಂದ ಇರುವ ನೀರಿನಲ್ಲೇ ನಾವು ಇನ್ನು ಒಂದು ತಿಂಗಳ ಕಾಲ ಮಾತ್ರ ಸಂಭಾಳಿಸಬಹುದು. ನಗರಕ್ಕೆ ಕುಡಿಯಲು ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ನಾವು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕುಡಿಯಲು ಬಿಟ್ಟು ಬೇರೆ ಯಾವುದೇ ಕಾರಣಗಳಿಗೆ ನಾವು ಡೆಡ್​ ಸ್ಟೋರೇಜ್​ ನೀರನ್ನು ಬಳಸುವ ಹಾಗಿಲ್ಲ. ಜಿಲ್ಲಾಡಳಿತ ಕೂಡಾ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಆದೇಶ ಮಾಡಿದೆ ಎಂದು ಡ್ಯಾಂನ ಕಾರ್ಯಾಕಾರಿ ಅಭಿಯಂತರ ರಮೇಶ್​ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ. 

ನೀರಿನ ಅಭಾವದ ಕಾರಣ ನಗರದ ಹೊರಗಿನ ಕೆಲ ವಾರ್ಡ್​ಗಳಿಗೂ ಕೂಡಾ ಕುಡಿಯಲು ನೀರು ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಕೂಡಾ ಕೃಷಿ ಚಟುವಟಿಕೆಗಳಿಗೆ ನೀರು ಬಿಡದಂತೆ ಆದೇಶ ಮಾಡಿದೆ. ಅಲ್ಲದೆ ಮೊದಲ ಆದ್ಯತೆಯಾಗಿ ಜನರಿಗೆ ಕುಡಿಯುವುದಕ್ಕಾಗಿ ಮಾತ್ರ ನೀರು ಪೂರೈಸಲು ಹೇಳಿದೆ ಎಂದು ರಮೇಶ್​ ತಿಳಿಸಿದ್ದಾರೆ. 

ಈಗ ಮಳೆ ತಡವಾಗಿದೆ. ಇಂತಹ ಸ್ಥಿತಿಯನ್ನು ನಾವು 3-4 ವರ್ಷಗಳಿಂದ ಎದುರಿಸುತ್ತಿದ್ದೇವೆ ಅಂತಾ ನೀರು ಪೂರೈಕೆ ಮಾಡುವ ಟ್ಯಾಂಕರ್​ ಮಾಲೀಕ ತಿಮ್ಮೇಗೌಡ ಎಂಬುವರು ಹೇಳಿದ್ದಾರೆ. 

ಅಲ್ಲದೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಕೂಡಾ ಕುಡಿಯುವ ನೀರಿನ ಲಭ್ಯತೆಯನ್ನು ನೋಡಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗದ ಗ್ರಾಮೀಣ ಭಾಗಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ದಯಾನಂದ ತಿಳಿಸಿದ್ದಾರೆ. ಅಲ್ಲದೆ ಶಿವಮೊಗ್ಗ ನಗರ ತುಂಗಾ ಡ್ಯಾಂ ನೀರಿನ ಮೇಲೆ ಅವಲಂಬಿತವಾಗಿದ್ದು, ಮಳೆ ಚೆನ್ನಾಗಿ ಬರಲಿ ಅಂತಾ ಅವರು ಆಶಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.