ETV Bharat / state

ಕಾಡಿದ ಮೂರ್ಛೆ ರೋಗ: ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ... 150 ಮೀಟರ್ ಎಳೆದೊಯ್ದ ಉಗಿಬಂಡಿ - ಶಿವಮೊಗ್ಗದಲ್ಲಿ ಯುವತಿ  ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಶಿವಮೊಗ್ಗದಲ್ಲಿ ಯುವತಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

150 ಮೀಟರ್ ಎಳೆದೊಯ್ದ ರೈಲು
150 ಮೀಟರ್ ಎಳೆದೊಯ್ದ ರೈಲು
author img

By

Published : Jan 6, 2020, 5:30 PM IST

ಶಿವಮೊಗ್ಗ: ಮೂರ್ಚೆ ರೋಗದಿಂದ ಬಳಲುತ್ತಿದ್ದ ಯುವತಿಯೊಬ್ಬಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ವಿದ್ಯಾನಗರ ದೂರದರ್ಶನ ಕೇಂದ್ರದ ಹಿಂಭಾಗ ನಡೆದಿದೆ.

ವಿದ್ಯಾನಗರದ ನಿವಾಸಿ ರಕ್ಷಿತ (18) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಇಂದು ಬೆಳಗ್ಗೆ ಮೈಸೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲು ಆಕೆಯನ್ನು ಸುಮಾರು 150 ಮೀಟರ್ ದೂರ ಎಳೆದು ಕೊಂಡು ಹೋದ ಪರಿಣಾಮ ದೇಹ ನಜ್ಜು ಗುಜ್ಜಾಗಿದೆ.

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಾಯಿ ಹೇಳಿಕೆ

ರಕ್ಷಿತಳಿಗೆ ಹುಟ್ಟಿನಿಂದಲೂ ಮೂರ್ಛೆ ರೋಗ ಇತ್ತು. ಅಲ್ಲದೆ ಈಕೆಗೆ ಹರಿಣಿ ಆಗಿತ್ತು. ಇದಕ್ಕಾಗಿ ಅಪರೇಷನ್ ಕೂಡ ಮಾಡಿಸಲಾಗಿತ್ತು. ಬಳಿಕ ಹೊಟ್ಟೆ ನೋವು ಕಡಿಮೆ ಆಗದ ಕಾರಣ ನರಳುತ್ತಿದ್ದಳು ಎನ್ನಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ರಕ್ಷಿತ ಮನೆಯಲ್ಲೆ ಇರುತ್ತಿದ್ದಳು. ಎಂದಿನಂತೆ ತಾಯಿ ಮನೆಗೆ ಬಂದು ನೋಡಿದಾಗ ಮಗಳು ಕಾಣದೆ ತಾಯಿ ಗಾಬರಿಗೊಂಡು ಹುಡುಕಾಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ರೈಲ್ವೆ ಎಎಸ್ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ.

Intro:ಮೂರ್ಚೆ ರೋಗದಿಂದ ಬಳಲುತ್ತಿದ್ದ ಯುವತಿಯೂರ್ವಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಶಿವಮೊಗ್ಗ ವಿದ್ಯಾನಗರ ದೂರದರ್ಶನ ಕೇಂದ್ರದ ಹಿಂಭಾಗ ಘಟನೆ ನಡೆದಿದೆ. ಶಿವಮೊಗ್ಗದ ವಿದ್ಯಾನಗರದ ನಾಲ್ಕನೆ ತಿರುವಿನ ರಕ್ಷಿತ (18) ಎಂಬ ಯುವತಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ.ಇಂದು ಬೆಳಗ್ಗೆ ಮೈಸೂರಿನಿಂದ ಶಿವಮೊಗ್ಗಕ್ಕೆ ಬರುವ ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಕ್ಷಿತ ರೈಲಿಗೆ ಸಿಲುಕಿದ ಪರಿಣಾಮ ಆಕೆಯ ಕಾಲು ಕಟ್ ಆಗಿದೆ. ಇನ್ನೂ ರೈಲು ಆಕೆಯನ್ನು ಸುಮಾರು 150 ಮೀಟರ್ ದೂರ ಹಳಿ ಮೇಲೆ ಎಳೆದು ಕೊಂಡು ಹೋಗಿದೆ. ಇದರಿಂದ ದೇಹ ನಜ್ಜು ಗುಜ್ಜಾಗಿದೆ.

Body:ರಕ್ಷಿತಳಿಗೆ ಹುಟ್ಟಿನಿಂದಲೂ ಮೂರ್ಚೆ ರೋಗ ಇತ್ತು. ಇದಕ್ಕೆ ಮಾನಸ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅಲ್ಲದೆ ಈಕೆಗೆ ಹರಣಿ ಆಗಿತ್ತು. ಹರಣಿ ಅಪರೇಷನ್ ಅನ್ನು ಇತ್ತಿಚೇಗೆ ಮಾಡಿಸಲಾಗಿತ್ತು. ಆಪರೇಷನ್ ಆದ ನಂತ್ರ ಹೊಟ್ಟೆ ನೋವು ಅಂತ ಹೇಳಿದಕ್ಕೆ ನಿನ್ನ ತಾನೆ ಆಸ್ಪತ್ರೆಗೆ ತೋರಿಸಿ ಕೊಂಡು ಬರಲಾಗಿತ್ತು. ರಕ್ಷಿತಳಿಗೆ ತಂದೆ ಇಲ್ಲ ತಾಯಿ ಮಹಾದೇವಿನೆ ಎಲ್ಲಾ. ತಾಯಿ ಮಹಾದೇವಿ ಮನೆಗೆಲಸ ಮಾಡಿ ಮಗಳನ್ನು ಸಾಕುತ್ತಿದ್ದರು. ರಕ್ಷಿತ ಪ್ರತಿ ದಿನ ಮಾತ್ರೆಗಳನ್ನು ನುಂಗಿ ಮಲಗುತ್ತಿದ್ದಳು. ಇದರಿಂದ ಬೆಳಗ್ಗೆ 10 ಗಂಟೆಯ ನಂತ್ರ ಎದ್ದೆಳುತ್ತಿದ್ದಳು.

Conclusion:ರಕ್ಷಿತ ತಾಯಿ ಮಹಾದೇವಿ ಮನೆ ಕೆಲಸಕ್ಕೆ ಬೆಳಗ್ಗೆನೆ ಹೋಗುತ್ತಿದ್ದ ಕಾರಣ ತಾಯಿನೇ ಬಂದು ಮಗಳನ್ನು ಎದ್ದೆಳಿಸಿ ತಿಂಡಿ ನೀಡುತ್ತಿದ್ದಳು. ಇಂದು ಮಹಾದೇವಿ ಮನೆ ಬಳಿ ಬಂದಾಗ ಜನರು ರೈಲು ಹಳಿಗಳ ಬಳಿ ಓಡು ಹೋಗುತ್ತಿರುವುದನ್ನು ನೋಡಿ ಈಕೆಯು ಜನರ ಹಿಂದೆ ಬಂದು ನೋಡಿದಾಗ ಮಗಳು ಸಾವನ್ನಪ್ಪಿದ್ದು ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೆ ಎಎಸ್ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಕೇಸು ದಾಖಲಿಸಿ ಕೊಂಡಿದ್ದಾರೆ.

ಬೈಟ್: ಮಹಾದೇವಿ. ಮೃತ ರಕ್ಷಿತಳ ತಾಯಿ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.