ಶಿವಮೊಗ್ಗ : ಕೋವಿಡ್ ಕಾರಣ ಘೋಷಣೆಯಾಗಿದ್ದ ಲಾಕ್ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ರೈಲು ಸಂಚಾರ ಹಂತಹಂತವಾಗಿ ಪುನಾರಂಭವಾಗುತ್ತಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನೈಋತ್ಯ ರೈಲ್ವೆ ಇಲಾಖೆ, ತಾಳಗುಪ್ಪ, ಮೈಸೂರು, ಬೆಂಗಳೂರಿಗೆ ರೈಲು ಸೇವೆ ಪುನಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದೆ.
*ಯಾವೆಲ್ಲ ರೈಲುಗಳು ಪುನಾರಂಭವಾಗುತ್ತೆ?
- ರೈಲು ಸಂಖ್ಯೆ 06227: ಮೈಸೂರಿನಿಂದ ತಾಳಗುಪ್ಪ - ಡಿಸೆಂಬರ್ 9ರಿಂದ 18ರವರೆಗೆ ಪ್ರತಿದಿನ ಸಂಚರಿಸಲಿದೆ.
- ರೈಲು ಸಂಖ್ಯೆ 06228: ತಾಳಗುಪ್ಪದಿಂದ ಮೈಸೂರಿಗೆ - ಡಿಸೆಂಬರ್ 10 ರಿಂದ 19ರವರೆಗೆ ಪ್ರತಿದಿನ ಸಂಚರಿಸಲಿದೆ.
- ರೈಲು ಸಂಖ್ಯೆ 06529: ಬೆಂಗಳೂರಿನಿಂದ ತಾಳಗುಪ್ಪ - ಡಿಸೆಂಬರ್ 7ರಿಂದ 16ರವರೆಗೆ ಪ್ರತಿದಿನ ಸಂಚರಿಸಲಿದೆ.
- ರೈಲು ಸಂಖ್ಯೆ 06530: ತಾಳಗುಪ್ಪದಿಂದ ಬೆಂಗಳೂರಿಗೆ - ಡಿಸೆಂಬರ್ 8ರಿಂದ 17ರವರೆಗೆ ಪ್ರತಿದಿನ ಸಂಚಾರ ಮಾಡಲಿದೆ.
ಈ ಸುದ್ದಿಯನ್ನೂ ಓದಿ: ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಧಿ ವಿಸ್ತರಿಸುವ ಚಿಂತನೆ ಇದೆ : ಡಿಸಿಎಂ ಡಾ.ಸಿ ಎನ್ ಅಶ್ವತ್ಥ್ ನಾರಾಯಣ
ಸೀಟುಗಳನ್ನು ರಿಸರ್ವ್ ಮಾಡಿಕೊಳ್ಳಬೇಕು. ರಿಸರ್ವ್ ಮಾಡಿಸಿದ ಪ್ರಯಾಣಿಕರಿಗಷ್ಟೇ ರೈಲು ಹತ್ತಲು ಅವಕಾಶವಿದೆ. ಇನ್ನು, ಪ್ರಯಾಣಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಸೇರಿದ ಕೋವಿಡ್ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.