ETV Bharat / state

ಮೀನಿನ ವಾಹನದಲ್ಲಿ ಗಾಂಜಾ ಸಾಗಾಟ : ಹೊಸ ನಗರ ಪೊಲೀಸರಿಂದ ಇಬ್ಬರ ಬಂಧನ - ಮಾವಿನಕೊಪ್ಪ

ಈ ವಾಹನವು ಬಟ್ಟೆಮಲ್ಲಪ್ಪದಿಂದ ಹೊಸನಗರದ ಕಡೆಗೆ ಬರುತ್ತಿತ್ತು. ಈ ವೇಳೆ ದಾಳಿ ನಡೆಸಿರುವ ಪೊಲೀಸರು, ಫಯಾಜ್ ಹಾಗೂ ಕರೀದ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಗಾಂಜಾ ಸಮೇತ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದಾರೆ..

ಗಾಂಜಾ ಸಾಗಾಟ
v ಗಾಂಜಾ ಸಾಗಾಟ
author img

By

Published : Oct 22, 2021, 10:30 PM IST

ಶಿವಮೊಗ್ಗ : ಮೀನು ಸಾಗಾಟ ಮಾಡುವ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಹೊಸ ನಗರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಾವಿನಕೊಪ್ಪ ಬಳಿ ವಾಹನ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಒಂದು ಕೆಜಿ ಗಾಂಜಾ ಇರುವುದು ಪತ್ತೆಯಾಗಿದೆ.

ಹೊಸನಗರ ಡಿವೈಎಸ್​ಪಿಯವರ ಆದೇಶದ ಮೇರೆಗೆ ಸರ್ಕಲ್​ ಇನ್ಸ್​ಪೆಕ್ಟರ್ ಮಧುಸೂಧನ್​ರವರ ಮಾರ್ಗದರ್ಶನದಲ್ಲಿ ರಾಜೇಂದ್ರ ನಾಯ್ಕ್ ತಮ್ಮ ಸಿಬ್ಬಂದಿಯ ಜತೆ ಕಾರ್ಯಾಚರಣೆ ನಡೆಸಿದ್ದಾರೆ.

ಈ ವಾಹನವು ಬಟ್ಟೆಮಲ್ಲಪ್ಪದಿಂದ ಹೊಸನಗರದ ಕಡೆಗೆ ಬರುತ್ತಿತ್ತು. ಈ ವೇಳೆ ದಾಳಿ ನಡೆಸಿರುವ ಪೊಲೀಸರು, ಫಯಾಜ್ ಹಾಗೂ ಕರೀದ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಗಾಂಜಾ ಸಮೇತ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ: 27 ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.