ಶಿವಮೊಗ್ಗ: ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಯನೂರು ಗ್ರಾಮದ ಬಳಿ ನಡೆದಿದೆ.
![Toying car collid with a bike: one died!](https://etvbharatimages.akamaized.net/etvbharat/prod-images/5952638_death.jpg)
ಮೃತನನ್ನು ಹೊಸನಗರ ರಸ್ತೆಯ ಚಾಮುಂಡಿಪುರದ ನಿವಾಸಿ ಮೋಹನ್ (45) ಎಂದು ಗುರುತಿಸಲಾಗಿದೆ. ಆಯನೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಚನ್ನಹಳ್ಳಿ ಗ್ರಾಮದ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಎದುರು ಅಪಘಾತ ನಡೆದಿದೆ. ಸದ್ಯ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.