ETV Bharat / state

ಜೋಗದ ಸಿರಿ ಹೆಚ್ಚಿಸಿದ ಮುಂಗಾರು ಮಳೆ: ಶ್ವೇತವೈಭವದ ಅಂದಚಂದ ಪ್ರವಾಸಿಗರಿಗೆ ಆನಂದ

ಮಳೆಗಾಲ ಹಿನ್ನೆಲೆಯಲ್ಲಿ ಇಮ್ಮಡಿಯಾಗುತ್ತಿರುವ ಜೋಗ ಜಲಪಾತದ ಸೌಂದರ್ಯರಾಶಿಯನ್ನು ಮನದುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಪಾತಕ್ಕೆ ಭೇಟಿ ಕೊಡುತ್ತಿದ್ದಾರೆ.

jog falls
ಜೋಗ ಜಲಪಾತ
author img

By

Published : Jul 11, 2021, 5:17 PM IST

ಶಿವಮೊಗ್ಗ: ಮಳೆಗಾಲ ಬಂದ್ರೆ ಸಾಕು ಜಗತ್ಪ್ರಸಿದ್ಧ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಲಗ್ಗೆ ಇಡುತ್ತದೆ. ಈ ಬಾರಿ ಮುಂಗಾರು ಮಳೆ ಪ್ರಾರಂಭದಲ್ಲಿ ಲಾಕ್​ಡೌನ್ ಇದ್ದ ಕಾರಣ ಪ್ರವಾಸಿಗರು ಬರಲಾಗಲಿಲ್ಲ. ಆದ್ರೆ ಅನ್​ಲಾಕ್​ ಆಗಿದ್ದೇ ತಡ ಜೋಗದತ್ತ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಜೋಗ ಜಲಪಾತ

ಜೋಗ ಜಲಪಾತದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತ ಮೈದುಂಬಲಾರಂಭಿಸಿದೆ. ಹೀಗಾಗಿ ನಿನ್ನೆಯಿಂದ ವೀಕೆಂಡ್‌ ಪ್ರವಾಸಿಗರು ಜೋಗದತ್ತ ಮುಖ ಮಾಡಿದ್ದಾರೆ. ನಿನ್ನೆ ಜೋಗ ಜಲಪಾತಕ್ಕೆ ಸುಮಾರು 4 ಸಾವಿರಷ್ಟು ಪ್ರವಾಸಿಗರು ಆಗಮಿಸಿದ್ದಾರೆ. ಇಂದು 1 ಲಕ್ಷದಷ್ಟು ಜನ ಆಗಮಿಸುವ ನಿರೀಕ್ಷೆ ಇದೆ.

ಧೋ ಎಂದು ಧುಮ್ಮಿಕ್ಕುವ ಜಲಪಾತದ ಶ್ವೇತವೈಭವವನ್ನು ನೋಡಿ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಜಲಪಾತದ ನೈಜ ಅಂದ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ರಾಜಾ, ರಾಣಿ, ರೂರಲ್, ರಾಕೆಟ್​ ಸದ್ಯ ನೋಡಲು ಲಭ್ಯವಾಗುತ್ತಿದೆ. ಲಾಕ್​ಡೌನ್​ನಿಂದ ಎಲ್ಲೂ ಹೋಗಲಾಗದೇ ಮನೆಯಲ್ಲಿಯೇ ಇದ್ದ ಜನ ,ಇದೀಗ ಜೋಗದ ಅಂದ ಚಂದ ಕಂಡು ಆನಂದ ಪಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.