ETV Bharat / state

ಶಿವಮೊಗ್ಗ.. ನಾಳೆಯಿಂದ ಅನ್ಯ ರಾಜ್ಯಗಳಿಗೆ ವಿಮಾನಯಾನ ಪ್ರಾರಂಭ: ಸ್ಟಾರ್ ಏರ್​ಲೈನ್ಸ್​ನಿಂದ ಸೇವೆ ಶುರು

ಶಿವಮೊಗ್ಗದಿಂದ ಅನ್ಯ ರಾಜ್ಯಗಳಿಗೆ ನಾಳೆಯಿಂದ ವಿಮಾನ ಸಂಪರ್ಕ ಪ್ರಾರಂಭವಾಗಲಿದೆ.

ಶಿವಮೊಗ್ಗ
ಶಿವಮೊಗ್ಗ
author img

By ETV Bharat Karnataka Team

Published : Nov 20, 2023, 8:38 PM IST

ನಾಳೆಯಿಂದ ಶಿವಮೊಗ್ಗದಿಂದ ಅನ್ಯ ರಾಜ್ಯಕ್ಕೆ ವಿಮಾನ ಸಂಪರ್ಕ ಪ್ರಾರಂಭ

ಶಿವಮೊಗ್ಗ: ನಾಳೆಯಿಂದ ಮಲೆನಾಡಿನಿಂದ ಅನ್ಯ ರಾಜ್ಯಗಳಿಗೆ ಲೋಹದ ಹಕ್ಕಿಯ ಸೇವೆ ಪ್ರಾರಂಭವಾಗಲಿದೆ. ನಾಳೆಯಿಂದ ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ, ಗೋವಾ ರಾಜ್ಯಗಳಿಗೆ ವಿಮಾನಯಾನ ಪ್ರಾರಂಭವಾಗಲಿದೆ. ಸ್ಟಾರ್ ಏರ್ ಲೈನ್ಸ್ ಹೈದರಾಬಾದ್​ನಿಂದ ನಾಳೆ ಬೆಳಗ್ಗೆ 9:30 ಕ್ಕೆ ಹೊರಟು ಶಿವಮೊಗ್ಗಕ್ಕೆ 10:35 ಕ್ಕೆ ಆಗಮಿಸಲಿದೆ. ಹೈದರಾಬಾದ್​ಗೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸೇವೆ ನೀಡಲಿದೆ.

ಶಿವಮೊಗ್ಗದಿಂದ ಗೋವಾಕ್ಕೆ: ಶಿವಮೊಗ್ಗದಿಂದ 13.55 ಕ್ಕೆ ಹೊರಟು ಗೋವಾಕ್ಕೆ 14.45 ಕ್ಕೆ ಗೋವಾದಲ್ಲಿ ವಿಮಾನ ಇಳಿಯಲಿದೆ. ಶಿವಮೊಗ್ಗದಿಂದ ಗೋವಾಕ್ಕೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸ್ಟಾರ್ ಏರ್ ಲೈನ್ಸ್ ತನ್ನ ಸೇವೆಯನ್ನು ನೀಡಲಿದೆ.

ಶಿವಮೊಗ್ಗ- ತಿರುಪತಿ ಸೇವೆ: ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ವಿಮಾನ ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ. ಈ ಸೇವೆಯು ಮಂಗಳವಾರ, ಗುರುವಾರ ಹಾಗೂ ಶನಿವಾರ ಇರಲಿದೆ. ಮಂಗಳವಾರ, ಗುರುವಾರ ಹಾಗೂ ಶನಿವಾರ ವಿಮಾನವು ಮಧ್ಯಾಹ್ನ 12.35 ಕ್ಕೆ ತಿರುಪತಿಯಿಂದ ಹೊರಟು ಶಿವಮೊಗ್ಗಕ್ಕೆ 13.40 ಕ್ಕೆ ಬರಲಿದೆ. ಬುಧವಾರ ಶಿವಮೊಗ್ಗದಿಂದ 13:40ಕ್ಕೆ ಹೊರಟ ವಿಮಾನವು ಮಧ್ಯಾಹ್ನ 14:35ಕ್ಕೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 15:05 ಕ್ಕೆ ತಿರುಪತಿಯಿಂದ ಹೊರಡುವ ವಿಮಾನ 15:55 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಈಗಾಗಲೇ ಸ್ಟಾರ್ ಏರ್​ಲೈನ್ಸ್​ನ ಸಿಬ್ಬಂದಿ ಆಗಮಿಸಿದ್ದಾರೆ. ಅಲ್ಲದೆ, ಪ್ರಯಾಣಿಕರನ್ನು ರನ್ ವೇ ಬಳಿ ಕರೆದುಕೊಂಡು ಹೋಗಲು ಸ್ಟಾರ್ ಏರ್​ಲೈನ್ಸ್ ಬಸ್ ಆಗಮಿಸಲಿದೆ. ಈಗಾಗಲೇ ತಿರುಪತಿಗೆ, ಗೋವಾ ಹಾಗೂ ಹೈದರಬಾದ್​ಗೆ ಟಿಕೆಟ್​ ಬುಕಿಂಗ್ ನಡೆದಿದೆ.

ಮಂಗಳೂರಿನಿಂದ ದೆಹಲಿಗೆ ವಿಮಾನಯಾನ ಸೇವೆ: ಇಂಡಿಗೋ ಸಂಸ್ಥೆಯು (ಜನವರಿ 27) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ದೈನಂದಿನ ವಿಮಾನ ಸೇವೆಯನ್ನು ಪ್ರಾರಂಭಿಸಿತ್ತು. ಇಂಡಿಗೋ ಮೊದಲ ಪ್ರಯಾಣವು ವಿಮಾನ ( 6e 6303) ದೆಹಲಿಯಿಂದ ಅಂದು ಮಧ್ಯಾಹ್ನ 2.55 ಗೆ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 6.05ಗೆ ತಲುಪಿತ್ತು.

ವಿಮಾನ (6E 6304) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6. 35ಕ್ಕೆ ಹೊರಟು ರಾತ್ರಿ 9.35ಕ್ಕೆ ದೆಹಲಿ ತಲುಪಿತ್ತು. ಮಂಗಳೂರಿ‌ನಿಂದ ಹೊರಟ ವಿಮಾನ (6E 6304 )ವು ಅಂದು 147 ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ದಿದೆ. ಜನವರಿ 28 ರಂದು ವಿಮಾನ 170 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ : ಮಂಗಳೂರಿನಿಂದ ದೆಹಲಿಗೆ ಇಂದಿನಿಂದ ಇಂಡಿಗೋ ವಿಮಾನ ಯಾನ ಸೇವೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.