ಶಿವಮೊಗ್ಗ: ಕೆಂಪೇಗೌಡರು ದೇಶಭಕ್ತಿಗೆ ಆದರ್ಶ, ಟಿಪ್ಪು ಸುಲ್ತಾನ್ ದೇಶದ್ರೋಹಕ್ಕೆ ಹೆಸರುವಾಸಿ. ದೇಶ ಭಕ್ತರ ವಿಚಾರ ಬಹಳ ಬೇಗ ಜನರಿಗೆ ತಲುಪಬಾರದು ಎಂಬ ಉದ್ದೇಶದಿಂದ ತನ್ವಿರ್ ಸೇಠ್ನಂತಹವರು ಕೆಂಪೇಗೌಡರ ಪ್ರತಿಮೆಯಂತೆ ನಾವು ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.
ಕನಕ ಜಯಂತಿ ಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಆದರ್ಶ ಜನ ಪರಿಪಾಲನೆ ಮಾಡಬಾರದು ಎಂಬ ಉದ್ದೇಶದಿಂದ ಕೆಲವು ದೇಶದ್ರೋಹಿಗಳು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಿದ್ದಾರೆ. ಕೆಂಪೇಗೌಡ ಅತ್ಯಂತ ಒಳ್ಳೆಯ ಆಡಳಿತಗಾರ, ಕೆಂಪೇಗೌಡರು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಕೆರೆಕಟ್ಟೆ ನಿರ್ಮಾಣ, ಪಾರ್ಕ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರಿಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ದರು ಎಂದರು.
ಸತೀಶ್ ಜಾರಕಿಹೊಳಿ ಕ್ಷಮಾಪಣ ವಿಚಾರ: ಕೆಲವರು ಧರ್ಮವನ್ನು ಉಳಿಸುತ್ತಾರೆ. ಧರ್ಮದ ಸಿದ್ಧಾಂತ ಸಾಮಾನ್ಯ ಜನವರಿಗೆ ತಿಳಿಸುವ ಮೂಲಕ ಪ್ರಖ್ಯಾತಿ ಆಗಿದ್ದಾರೆ. ಇಂದು ಕನಕದಾಸ ಜಯಂತಿ, ಮೊದಲ ಹಿಂದುತ್ವ ಪ್ರತಿಪಾದಕ ಕನಕದಾಸರು. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಇಡಿ ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ. ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿರುವ ಜಾರಕಿಹೊಳಿ ರಾಮಾಯಣಕ್ಕೆ ಮಹಾಭಾರತಕ್ಕೆ ಈ ದೇಶದ ಸಿದ್ದಾಂತಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೆಂಪೇಗೌಡ ಪ್ರತಿಮೆ ಅನಾವರಣ ಪಕ್ಷದ ಕಾರ್ಯಕ್ರಮದಂತಿದೆ: ಹೆಚ್.ವಿಶ್ವನಾಥ್ ಬೇಸರ