ಶಿವಮೊಗ್ಗ: ನಗರದ ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರದ ಪಕ್ಕದಲ್ಲಿರುವ ಪಾರ್ಕ್ನಲ್ಲಿ ಮೂರು ಕೊಕ್ಕರೆಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಮೂರು ಕೊಕ್ಕರೆ ಸತ್ತಿರುವ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ವಿಶ್ವಾಸ್ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಪಶುಪಾಲನ ಮತ್ತು ವೈದ್ಯಕೀಯ ಇಲಾಖೆ ವೈದ್ಯರು ಹಾಗೂ ಪ್ರಾದೇಶಿಕ ಸಂಶೋಧನಾ ಕೇಂದ್ರ ಅಧಿಕಾರಿಗಳು ಕೊಕ್ಕರೆಗಳ ಮೃತದೇಹವನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣಗಳು ಕಂಡುಬಂದಿಲ್ಲ. ನಗರದ ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಕೊಕ್ಕರೆಗಳು ತುಂಬಾ ಮೇಲೆ ಹಾರುವ ಸಂದರ್ಭದಲ್ಲಿ ತಾಪಮಾನದಿಂದ ಹೀಗೆ ಸಾಯುತ್ತವೆ. ಸತ್ತಿರುವ ಕೊಕ್ಕರೆಗಳನ್ನು ಹೆಚ್ಚಿನ ಸಂಶೋಧನೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.