ಶಿವಮೊಗ್ಗ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ತ್ಯಾವರೆತೆಪ್ಪ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ತ್ಯಾವರೆತೆಪ್ಪ ಗ್ರಾಮದ ಶಿವಮೂರ್ತಿ ಬಸಪ್ಪ (48), ಬಸವರಾಜ ಆನಂದಪ್ಪ (45), ಆಕಾಶ್ ಬಸವರಾಜಪ್ಪ (19) ಮೀನು ಹಿಡಿಯಲು ಹೋಗಿದ್ದಾರೆ. ಮೀನು ಹಿಡಿಯುವ ಸಂದರ್ಭದಲ್ಲಿ ತೆಪ್ಪ ಮುಳುಗಿದೆ. ಈ ವೇಳೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಶವಗಳನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಆನವಟ್ಟಿ ಪಿಎಸ್‌ಐ ಅರವಿಂದ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.