ETV Bharat / state

ಇಪ್ಪತ್ತು ವರ್ಷಗಳ ಹಿಂದೆ ಊರು ಬಿಟ್ರು:  ಹುಟ್ಟೂರಿಗೇ ಬಂದು ಆತ್ಮಹತ್ಯೆ ಮಾಡಿಕೊಂಡ್ರು! ಏನಿದು ಸುಸೈಡ್​ ಮಿಸ್ಟ್ರಿ?

ಹುಟ್ಟಿದ ಊರನ್ನು ತೊರೆದು ಹೋಗಿದ್ದವರು ಮತ್ತೆ ಅದೇ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶಿವಮೊಗ್ಗ ತಾಲೂಕು ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ

three-people-commit-suicide
ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಮೂರು ಜನ ಆತ್ಮಹತ್ಯೆ
author img

By

Published : Jan 23, 2020, 9:21 PM IST

ಶಿವಮೊಗ್ಗ: ಹುಟ್ಟಿದ ಊರನ್ನು ತೊರೆದು ಹೋಗಿದ್ದವರು ಮತ್ತೆ ಅದೇ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶಿವಮೊಗ್ಗ ತಾಲೂಕು ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಜ್ಞಾನಮೂರ್ತಿ(58), ರತ್ನಮ್ಮ(53) ಹಾಗೂ ಚನ್ನೇಶ್(34) ಎಂಬ ಮೂವರು ವಿಷ ಸೇವಿಸಿದ್ದು, ಜ್ಞಾನಮೂರ್ತಿ ಹಾಗೂ ಚನ್ನೇಶ್ ಮೃತರಾಗಿದ್ದು, ರತ್ನಮ್ಮ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾರೆ.

ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಮೂರು ಜನ ಆತ್ಮಹತ್ಯೆ

ಕಳೆದ ಇಪ್ಪತ್ತು ವರ್ಷಗಳ ಹಿಂದೆ ಜ್ಞಾನಮೂರ್ತಿಯು ರತ್ನಮ್ಮ ಎಂಬ ವಿವಾಹಿತ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು, ತನ್ನ ಹೆಂಡ್ತಿ ಹಾಗೂ ಮೂವರು ಗಂಡು ಮಕ್ಕಳನ್ನು ಬಿಟ್ಟು ಮೈಸೂರಿನ ಬಲಮುರಿಗೆ ಹೋಗಿದ್ದ. ಅಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡು, ರತ್ನಮ್ಮಳ ಇಬ್ಬರು ಮಕ್ಕಳಿಗೆ ಮದುವೆ ಮಾಡಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದ ನುಗ್ಗೆ ಮಲ್ಲಾಪುರಕ್ಕೆ ಆಗಾಗ ಬಂದು ಹೋಗುವುದು ಮಾಡುತ್ತಿದ್ದರು. ಆದರೆ ನಿನ್ನೆ ಜ್ಞಾನಮೂರ್ತಿ, ರತ್ನಮ್ಮ ಹಾಗೂ ಮಗ ಚನ್ನೇಶನ ಶಿವಮೊಗ್ಗದತ್ತ ತಮ್ಮ ಕಾರಿನಲ್ಲಿ ಬಂದು, ನುಗ್ಗೆ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಕಾರಿನಲ್ಲಿ ಮೂವರು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಖಾಸಗಿ‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಜ್ಞಾನಮೂರ್ತಿ ಹಾಗೂ ಚನ್ನೇಶ್ ಸಾವನ್ನಪ್ಪಿದ್ದು, ರತ್ನಮ್ಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

Intro:20 ವರ್ಷದ ಹಿಂದೆ ಊರು ಬಿಟ್ಟು ಹೋದವರು ಅದೇ ಗ್ರಾಮಕ್ಕೆ ಬಂದು ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡ್ರು: ಆತ್ಮಹತ್ಯೆಗೆ ಕಾರಣ ಮಾತ್ರ ನಿಗೂಢ‌

ಶಿವಮೊಗ್ಗ: ಹುಟ್ಟೂರನ್ನು ತೊರೆದು ಹೋಗಿದ್ದವರು ಮತ್ತೆದೆ ಗ್ರಾಮಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ವಿಚಿತ್ರ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜ್ಞಾನಮೂರ್ತಿ(58), ರತ್ನಮ್ಮ(53) ಹಾಗೂ ಚನ್ನೇಶ್(34) ಎಂಬ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಇದರಲ್ಲಿ‌ ಜ್ಞಾನಮೂರ್ತಿ ಹಾಗೂ ಚನ್ನೇಶ್ ಮೃತರಾಗಿದ್ದು, ರತ್ನಮ್ಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ತಾಲೂಕು ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಜ್ಞಾನಮೂರ್ತಿ ಹಾಗೂ ಶಂಕರಮ್ಮ ಎಂಬುವರು ಮದುವೆಯಾಗಿ ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ನೆಲೆಸಿರುತ್ತಾರೆ. ಕಳೆದ 20 ವರ್ಷದ ಜ್ಞಾನಮೂರ್ತಿ ನುಗ್ಗೆ ಮಲ್ಲಾಪುರ ಗ್ರಾಮದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ರತ್ನಮ್ಮ ಎಂಬ ವಿವಾಹಿತ ಮಹಿಳೆಯ ಜೊತೆ ತಾನು ಕಟ್ಟಿ ಕೊಂಡಿದ್ದ ಹೆಂಡ್ತಿ ಹಾಗೂ ಮೂವರು ಗಂಡು ಮಕ್ಕಳನ್ನು ಬಿಟ್ಟು ರತ್ನಮ್ಮಳ ಇಬ್ಬರು ಮಕ್ಕಳನ್ನು ಕರೆದು ಕೊಂಡು ಮೈಸೂರಿನ ಬಲಮುರಿಗೆ ಹೋಗಿರುತ್ತಾರೆ. ಇಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಿ ಕೊಂಡು ಚೆನ್ನಾಗಿಯೇ ಜೀವನ ನಡೆಸಿ ಕೊಂಡು ರತ್ನಮ್ಮಳ ಇಬ್ಬರು ಮಕ್ಕಳಿಗೆ ಮದುವೆ ಮಾಡಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ನುಗ್ಗೆ ಮಲ್ಲಾಪುರಕ್ಕೆ ಸಂಬಂಧಿಗಳು ತೀರಿ ಹೋದಾಗ, ಹಬ್ಬಕ್ಕೆ ಬಂದು ಹೋಗುತ್ತಿದ್ದರು. ಆದರೆ ನಿನ್ನೆ ಜ್ಞಾನಮೂರ್ತಿ, ರತ್ನಮ್ಮ ಹಾಗೂ ಮಗ ಚನ್ನೇಶನ ಜೊತೆ ಬಲಮುರಿ ಗ್ರಾಮ ಬಿಟ್ಟು ಶಿವಮೊಗ್ಗ ಕಡೆ ತಮ್ಮದೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಶಿವಮೊಗ್ಗ ಕಡೆ ಬರುವಾಗ ಯಾರಿಗೂ ಹೇಳದೆ ಹೊರಟಿದ್ದಾರೆ. ನಿನ್ನೆ ಮಧ್ಯಾಹ್ನ ರತ್ನಮ್ಮಳ ಮಗಳು ಪೋನ್ ಮಾಡಿದಾಗ ಪೋನ್ ತೆಗೆಯದೆ ಇರುವುದರಿಂದ ಅನುಮಾನಗೊಂಡು ಬಲಮುರಿಯ ಪಕ್ಕದ ಮನೆಯವರಿಗೆ ಪೋನ್ ಮಾಡಿದಾಗ ಎಲ್ಲಿಗೆ ಹೋಗಿದ್ದಾರೂ ಗೂತ್ತಿಲ್ಲ. ರಾತ್ರಿಯಾಗಿದೆ. ಮನೆಯಲ್ಲಿ ದೀಪ ಹಚ್ಚಿಲ್ಲ ಎಂದು ಹೇಳಿದಾಗ ರತ್ನಮ್ಮನ ಮಗಳು ತನ್ನ ಗಂಡ ಗೀರೀಶರಿಗೆ ತಿಳಿಸಿದಾಗ ಅವರು ಜ್ಞಾನಮೂರ್ತಿರವರ ಮನೆ ಬಳಿ ನೋಡಿದಾಗ ಮನೆಯಲ್ಲಿ ಯಾರು ಇಲ್ಲದನ್ನು ಕಂಡು ಪೋನ್ ಮಾಡಿದಾಗ ಜ್ಞಾನಮೂರ್ತಿ ಸೇರಿದಂತೆ ಮೂವರು ಪೋನ್ ರಿಸೀವ್ ಮಾಡದೆ ಇದ್ದಾಗ‌ ಜ್ಞಾನಮೂರ್ತಿ ರವರ ಮೊಬೈಲ್ ಲೋಕೇಷನ್ ನೋಡ್ತಾ ಬಂದಾಗ ನುಗ್ಗೆ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಕಾರಿನಲ್ಲಿ ಮೂವರು ವಿಷ ಸೇವಿಸಿದ್ದು ತಿಳಿದು ಶಿನಮೊಗ್ಗೆ ಖಾಸಗಿ‌ ಆಸ್ಪತ್ರಗೆ ದಾಖಲು ಮಾಡಿದಾಗ ಜ್ಞಾನಮೂರ್ತಿ ಹಾಗೂ ಚನ್ನೇಶ್ ಮೃತರಾಗಿದ್ದರು.ಇನ್ನೂ ರತ್ನಮ್ಮ ಸಾವು ಬದುಕಿನ ನಡುವೆ ಹೋರಾಟ ಮಾಡ್ತಾ ಇದ್ದಾರೆ. ಇವರ ಸಾವಿನ ಬಗ್ಗೆ ತನಿಖೆ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರಾದ ಭೋಜನಾಯ್ಕರವರು.Body:
ಮೊಬೈಲ್ ಲೋಕೇಷನ್ ನಲ್ಲಿ ಮಾವ, ಅತ್ತೆ ಹಾಗೂ ಭಾವರನ್ನು ಪತ್ತೆ ಮಾಡಿದ ಅಳಿಯ: ಮಾವ, ಅತ್ತೆ ಹಾಗೂ ಭಾವರನ್ನು ಜ್ಞಾನಮೂರ್ತಿ ಅಳಿಯ ಗಿರೀಶ್ ರವರು ಮೊಬೈಲ್ ಟವರ್ ಮೇಲೆ ಪತ್ತೆ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಕಂಡ ಅಳಿಯ ಗಿರೀಶ್ ರ ವರು ಜ್ಞಾನಮೂರ್ತಿರವರಿಗೆ ಪೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೇ ನೀಡದೆ ಹೋದಾಗ ಗೀರಿಶ್ ರವರು, ಸಮೀಪದ. ಕೆಆರ್ ಎಸ್ ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಮಾವ ಹಾಗೂ ಅತ್ತೆ ಪೋನ್ ತೆಗೆಯುತ್ತಿಲ್ಲ ಎಂದು ಕಾಣೆಯಾಗಿದ್ದಾರೆ ಎಂದು ತಿಳಿಸಿ, ಕಾರು ಮಾಡಿ ಕೊಂಡು ಮೊಬೈಲ್ ಲೋಕೇಷನ್ ನೋಡ್ತಾ ಮೈಸೂರು ಜಿಲ್ಲೆಯಿಂದ ದಾವಣಗೆರೆ ಜಿಲ್ಲೆ ಹೊನ್ನಾಳಿಗೆ ಬಂದು ಅಲ್ಲಿಂದ ಸವಳಂಗ ಬಂದು, ನಂತ್ರ ನುಗ್ಗೆ ಮಲ್ಲಾಪುರ ಗ್ರಾಮದ ಹೊರ ಭಾಗದಲ್ಲಿ ಲೋಕೇಷನ್ ತೋರಿಸಿದೆ. ಗಿರೀಶ್ ಕಾರು ನಿಲ್ಲಿಸಿದ ಬಳಿ ರಸ್ತೆ ಪಕ್ಕದಲ್ಲಿ ಜ್ಞಾನಮೂರ್ತಿ ರವರ ಕಾರು ಸಿಕ್ಕಿದೆ. ಕಾರಿನಲ್ಲಿ ಮಾವ ಜ್ಞಾನಮೂರ್ತಿ, ಅತ್ತೆ ರತ್ನಮ್ಮ ಹಾಗೂ ಬಾಮೈದುನ ಚನ್ನೇಶ್ ಜ್ಞಾನ ತಪ್ಪಿ ಬಿದ್ದಿದ್ದರು. ತಕ್ಷಣ ಗಿರೀಶ್ ಸವಳಂಗ ಪೊಲೀಸರನ್ನು ಕರೆ ತಂದು ಕಾರನ್ನು ಓಪನ್ ಮಾಡಿಸಿದಾಗ ವಿಷ ಕುಡಿದಿರುವುದು ತಿಳಿದು ಬಂದಿದೆ.Conclusion:ಲ್ಲಿ ಲೋಕೇಷನ್ ತೋರಿಸಿದೆ. ಗಿರೀಶ್ ಕಾರು ನಿಲ್ಲಿಸಿದ ಬಳಿ ರಸ್ತೆ ಪಕ್ಕದಲ್ಲಿ ಜ್ಞಾನಮೂರ್ತಿ ರವರ ಕಾರು ಸಿಕ್ಕಿದೆ. ಕಾರಿನಲ್ಲಿ ಮಾವ ಜ್ಞಾನಮೂರ್ತಿ, ಅತ್ತೆ ರತ್ನಮ್ಮ ಹಾಗೂ ಬಾಮೈದುನ ಚನ್ನೇಶ್ ಜ್ಞಾನ ತಪ್ಪಿ ಬಿದ್ದಿದ್ದರು. ತಕ್ಷಣ ಗಿರೀಶ್ ಸವಳಂಗ ಪೊಲೀಸರನ್ನು ಕರೆ ತಂದು ಕಾರನ್ನು ಓಪನ್ ಮಾಡಿಸಿದಾಗ ವಿಷ ಕುಡಿದಿರುವುದು ತಿಳಿದು ಬಂದಿದೆ. ತಕ್ಷಣ ಮೂವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಿದಾಗ ಜ್ಞಾನಮೂರ್ತಿ ಹಾಗೂ ಚನ್ನೇಶ್ ಮೃತ ಪಟ್ಟಿದ್ದರು. ರತ್ನಮ್ಮ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತ್ನಮ್ಮರವರ ಹೇಳಿಕೆಯನ್ನು ಪಡೆದಿದ್ದು, ಜ್ಞಾನಮೂರ್ತಿ ಎರಡು ಕೋಟಿ ಸಾಲ ಮಾಡಿದ್ದಾಗಿ ಕುಂಸಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇವರ ಆತ್ಮಹತ್ಯೆಗೆ ಸಾಲನೇ ಕಾರಣವೇ. ಸಾಲ ಇದ್ದರು ಸಹ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿ ಕೊಳ್ಳಲು ಕಾರಣ ಏನೂ ಎಂಬುದರ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ. ಒಟ್ಟಾರೆ, ಊರು ಬಿಟ್ಟು ಹೋದ್ರು ಸಹ ಸಾಯಲು ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

ಬೈಟ್: ಭೋಜನಾಯ್ಕ. ಗ್ರಾಮಸ್ಥ( ಬಿಳಿ ಶರ್ಟ್)

ಬೈಟ್: ಗಿರೀಶ್. ಜ್ಞಾನಮೂರ್ತಿ ಅಳಿಯ( ಗ್ರೀನ್ ಜರ್ಕಿನ್)

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.