ETV Bharat / state

ಮಲೆನಾಡಿಗರಿಗೆ ಕೊರೊನಾ ಶಾಕ್​​ :​ ಶಾಹಿ ಗಾರ್ಮೆಂಟ್ಸ್​​ನ ಮೂವರಿಗೆ ಕೊರೊನಾ ! - shivamogga corona

ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್​​ನ ಮೂವರು ಕಾರ್ಮಿಕರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಸಂಸ್ಥೆಯನ್ನೆ ಸೀಲ್​ಡೌನ್​ ಮಾಡಲಾಗಿದೆ.

corona
ಶಾಹಿ ಗಾರ್ಮೆಂಟ್ಸ್​​ನ ಮೂವರಿಗೆ ಕೊರೊನಾ
author img

By

Published : Jun 24, 2020, 6:39 PM IST

ಶಿವಮೊಗ್ಗ : ಮಾಚೇನಹಳ್ಳಿಯಲ್ಲಿರುವ ಶಾಹಿ ಗಾರ್ಮೆಂಟ್ಸ್​​ನ ಮೂವರು ಕಾರ್ಮಿಕರಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದು, ಗಾರ್ಮೆಂಟ್ಸ್​​ನ ಮಿಲ್ ಭಾಗವನ್ನು‌ ಜಿಲ್ಲಾಡಳಿತ ಸೀಲ್​ಡೌನ್ ಮಾಡಿದೆ.

ಗಾರ್ಮೆಂಟ್ಸ್​ನ ಐವರು ನೌಕರರು ಊರಿಗೆ ಹೋಗಿ ಜೂನ್ 4 ರಂದು ವಾಪಸ್ ಆಗಿದ್ದರು. ವಾಪಾಸ್​​ ಬಂದವರ ಸ್ವಾಬ್ ತೆಗೆದು ಕ್ವಾರಂಟೈನ್ ಮಾಡಲಾಗಿತ್ತು. ಮೊದಲ ಭಾರಿ ಪರೀಕ್ಷೆ ನಡೆಸಿದಾಗ ನೆಗಟಿವ್ ಬಂದಿತ್ತು. ಇದೀಗ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಮೂವರ ವರದಿ ಪಾಸಿಟಿವ್ ಬಂದಿದೆ. ‌ಇವರನ್ನು ಜಿಲ್ಲಾ ಕೋವಿಡ್​ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಮೂವರ ಜೊತೆ ಪ್ರಾಥಮಿಕ‌ ಸಂಪರ್ಕ ಹೊಂದಿದ್ದ 16 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಶಾಹಿ ಗಾರ್ಮೆಂಟ್ಸ್​​ನ ಮೂವರಿಗೆ ಕೊರೊನಾ

ಸದ್ಯ ಶಾಹಿ ಗಾರ್ಮೆಂಟ್ಸ್​​ನ‌ ಮಿಲ್ ಭಾಗವನ್ನು ಸೀಲ್ ಡೌನ್ ಮಾಡಲಾಗಿದೆ.‌ ಇವರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಗಾರ್ಮೆಂಟ್ಸ್​ನಲ್ಲಿ ಸುಮಾರು‌ 10 ಸಾವಿರ ಜನ ಕಾರ್ಮಿಕರಿದ್ದಾರೆ.

ಉಪವಿಬಾಗಧಿಕಾರಿ‌ ಪ್ರಕಾಶ್, ತಹಶೀಲ್ದಾರ್ ನಾಗರಾಜ್ ಹಾಗೂ ಡಿಹೆಚ್ಓ ರನ್ನು ಒಳಗೊಂಡ ತಂಡವೊಂದನ್ನು ಜಿಲ್ಲಾಧಿಕಾರಿಗಳು ರಚನೆ ಮಾಡಿದ್ದು, ಇವರು ಗಾರ್ಮೆಂಟ್ಸ್​ಗೆ ಆಗಮಿಸಿ, ಮಿಲ್ ಭಾಗವನ್ನು‌ ಸ್ಯಾನಿಟೈಸ್​ ಮಾಡಿಸಿ, ಸೀಲ್​ಡೌನ್‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.