ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಬಹಳ ಜನಕ್ಕೆ ಅನುಕೂಲವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಸಾಕಷ್ಟು ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಕೆರೆ ಹೂಳು ತೆಗೆಯುವುದು ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯಡಿ ರೈತನ ಹೊಲದಲ್ಲಿ ಕೆಲಸ ಮಾಡಿಸಬಹುದು. ಆದರೆ ಜನ ಸಾಮೂಹಿಕ ಕೆಲಸಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ವೈಯಕ್ತಿಕ ಕಾಮಗಾರಿಗೂ ಸಹ ಅವಕಾಶವಿದೆ. ಈ ಯೋಜನೆಯ ಬಗ್ಗೆ ಫಲಾನುಭವಿಗಳಾದ ಅಬ್ಬಲಗೆರೆ ಗ್ರಾಮಸ್ಥೆ ಮಾತನಾಡಿ, ಈ ಯೋಜನೆಯು ಕಟ್ಟ ಕಡೆಯ ವ್ಯಕ್ತಿಗೂ ಸಹ ಒತ್ತು ನೀಡುತ್ತದೆ. ಗ್ರಾಮಸ್ಥನಾಗಿದ್ದು, ಆಧಾರ್ ಕಾರ್ಡ್ ಇದ್ದರೆ, ಅವರಿಗೆ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್ ನೀಡಲಾಗುತ್ತದೆ. ಲಾಕ್ಡೌನ್ನಲ್ಲಿ ಇದು ಅನುಕೂಲಕರವಾಗಿದೆ ಎನ್ನುತ್ತಾರೆ.
ಇನ್ನು ಕೂಲಿಗಾರರಾದ ಅಲಮೇಲಮ್ಮ ಹಾಗೂ ಪಾಂಡಪ್ಪ, ನಮಗೆ ನಮ್ಮ ಸಮಯಕ್ಕೆ ತಕ್ಕಂತೆ ಕೆಲಸ ಮಾಡುವ ಅವಕಾಶ ಮಾಡಿ ಕೊಟ್ಟಿದ್ದರು. ನಾವು ಬೆಳಗ್ಗೆ 6 ಗಂಟೆಗೆ ಹೋಗಿ 10 ಕ್ಕೆ ವಾಪಸ್ ಬರುತ್ತಿದ್ದೇವೆ. ನಮಗೆ ವಾರಕ್ಕೊಮ್ಮೆ ನಮ್ಮ ಖಾತೆಗೆ ಹಣ ಹಾಕುತ್ತಿದ್ದರು. ನಮಗೆ ಈಗಲೂ ಕೆಲಸ ನೀಡಿದರೂ ಮಾಡಲು ತಯಾರಿದ್ದೇವೆ ಎಂದರು.
ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಅನುಮೋದನೆ ನೀಡಲು ಸಾಕಷ್ಟು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ಮಾಡದೆ ಕೆಲಸಕ್ಕೆ ಬೇಗನೆ ಅನುಮೋದನೆ ಸಿಗುವಂತೆ ಮಾಡಬೇಕು ಹಾಗೂ ಕೃಷಿ ಕಾಮಗಾರಿಗೂ ಸಹ ಈ ಯೋಜನೆ ಅನ್ವಯವಾಗುವಂತೆ ಆದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. ಅಲ್ಲದೆ ಜನ ಕೆಲಸ ಮಾಡದೆ ಇದ್ದರೂ ಸಹ ಹಣ ಸಂದಾಯವಾಗುತ್ತದೆ ಎಂದು ಆರೋಪಿಸಿದ್ದಾರೆ.