ETV Bharat / state

ಶಿವಮೊಗ್ಗದಲ್ಲಿ ಪ್ರವಾಹದ ಎಫೆಕ್ಟ್​: ಲಕ್ಕವಳ್ಳಿಯ ಜೈನ ಮಠದ ಜೀರ್ಣೋದ್ಧಾರಕ್ಕೆ ಸ್ವಾಮೀಜಿ ಮನವಿ

ವರದಾ ನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನಮಠಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.

ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮಾತನಾಡಿದ್ದಾರೆ
author img

By

Published : Aug 21, 2019, 6:50 PM IST

ಶಿವಮೊಗ್ಗ: ವರದಾನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನಮಠಕ್ಕೆ ಸಾಕಷ್ಟು ಹಾನಿಯಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಬೇಕೆಂದು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈಟಿವಿ ಭಾರತ ಜೊತೆ ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಮಾತು

ಈ ಕುರಿತು ಈಟಿವಿ ಬಾರತನೊಂದಿಗೆ ಮಾತನಾಡಿದ ಅವರು, ಲಕ್ಕವಳ್ಳಿಯಲ್ಲಿರುವ ಜೈನಮಠಕ್ಕೆ ಪ್ರವಾಹದಿಂದ ಸಂಪೂರ್ಣ ಹಾನಿಯಾಗಿದ್ದು, ಮಠ , ಅಲ್ಲಿನ ದೇವಸ್ಥಾನ, ಪ್ರೌಢಶಾಲಾ ವಸತಿ ನಿಲಯ ಕಟ್ಟಡಗಳಿಗೆ ನೀರು ನುಗ್ಗಿದೆ. ಅಲ್ಲದೇ ಸುಮಾರು 20 ಕಟ್ಟಡಗಳಿಗೂ ಹಾನಿಯಾಗಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ತಕ್ಷಣವೇ ಮಠದ ಜೀರ್ಣೋದ್ಧಾರ ಮಾಡಿ ಮತ್ತು ವರದಾ ನದಿ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

Intro:ಶಿವಮೊಗ್ಗ,
ಪ್ರವಾಹವದಿಂದ ಜೈನ ಮಠಕ್ಕೆ ಹಾನಿ : ಪರಿಹಾರಕ್ಕೆ ಆಗ್ರಹ

ವರದಾನದಿಯ ಪ್ರವಾಹದಿಂದಾಗಿ ಸೊರಬ ತಾಲೂಕಿನ ಲಕ್ಕವಳ್ಳಿ ಯಲ್ಲಿರುವ ಶ್ರೀಮೋಕ್ಷ ಮಂದಿರ ಸಂಸ್ಥಾನ ಜೈನಮಠಕ್ಕೆ ಸಾಕಷ್ಟು ಹಾನಿಯಾಗಿದ್ದು ತಕ್ಷಣವೇ ಪರಿಹಾರ ನೀಡಬೇಕು ಎಂದು ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಆಗ್ರಹಿಸಿದರು.

Body:ಈ ಕುರಿತು ಮಾತನಾಡಿದವರು ಸೊರಬ ತಾಲೂಕಿನ ಲಕ್ಕವಳ್ಳಿ ಯಲ್ಲಿರುವ ಜೈನಮಠಕ್ಕೆ ನೆರೆ ಹಾನಿಯಿಂದಾಗಿ ಮಠವು ಸಂಪೂರ್ಣ ಹಾನಿಯಾಗಿದ್ದು. ಮಠ ಅಲ್ಲಿನ .ದೇವಸ್ಥಾನ, ಪ್ರೌಢಶಾಲಾ ವಸತಿ ನಿಲಯ ಕಟ್ಟಡಗಳಿಗೆ ನೀರು ನುಗ್ಗಿದೆ ಸುಮಾರು ಇಪ್ಪತ್ತು ಕಟ್ಟಡ ಗಳಿಗೆ ಹಾನಿಯಾಗಿದೆ.
ಕೋಟ್ಯಾಂತರ ನಷ್ಟವಾಗಿದ್ದು .ಸರ್ಕಾರ ತಕ್ಷಣವೇ ಮಠದ ಜೀರ್ಣೋದ್ಧಾರಕ್ಕೆ ಮತ್ತು ವರದಾ ನದಿ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಕ್ಷೇತ್ರವು ವರದಾ ನದಿ, ದಂಡಾವತಿ, ಕಚವಿ ಹಳ್ಳ ನದಿಗಳ ತ್ರಿವೇಣಿ ಸಂಗಮ ದಲ್ಲಿದೆ ,ಕೇವಲ ಜೈನ ರಲ್ಲದೆ ಎಲ್ಲಾ ಧರ್ಮದವರು ಮಠಕ್ಕೆ ಬರುತ್ತಾರೆ .ಮಠವು ಬಡಮಕ್ಕಳಿಗಾಗಿ ಪ್ರೌಢ ಶಾಲೆ ,ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದೆ .ಎಲ್ಲಾ ಉಚಿತ ಶಿಕ್ಷಣವಿದ್ದು. ಬಸದಿಗಳು, ಧರ್ಮಪೀಠ ,ಕುಲದೇವತಾ ಮಂದಿರ, ನವಗ್ರಹ ,ಯಾತ್ರಿ ನಿವಾಸ ,ಸಮುದಾಯ ಭವನ ಹೀಗೆ ನೀರು ನುಗ್ಗಿ ಎಲ್ಲವಕ್ಕೂ ಹಾನಿಆಗಿದೆ.ಈ ಐತಿಹಾಸಿಕ ಧಾರ್ಮಿಕ ಮಠವು ನೆರೆಯಿಂದ ಹಾನಿಯಾಗಿದ್ದು ಮುಖ್ಯಮಂತ್ರಿಗಳು ಕೂಡಲೇ ಮಠದ ಜೀರ್ಣೋದ್ಧಾರಕ್ಕೆ ನೆರವು ನೀಡಬೇಕು ಎಂದರು.

Conclusion:ನಂತರದಲ್ಲಿ ಮಾತನಾಡಿದವರು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಾದ ಜೈನರಿಗೆ ಯಾವ ಪ್ರಾತಿನಿಧ್ಯವನ್ನು ಸಚಿವ ಸಂಪುಟದಲ್ಲಿ ನೀಡಿಲ್ಲ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳುತ್ತಿಲ್ಲ ಹಾಗೂ ಹೆಚ್ಚಿನ ಅನುಧಾನಗಳು ನೀಡುತ್ತಿಲ್ಲ ಹೀಗೆ ಮುಂದುವರಿದರೆ ಮುಂಬರುವ ಉಪ ಚುನಾವಣೆಯಲ್ಲಿ ಜೈನರು ಬಿಜೆಪಿ ಹಾಗೂ ರಾಜ್ಯ ಸರ್ಕಾರ ವನ್ನ ತಿರಸ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೈಟ್-ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.