ಶಿವಮೊಗ್ಗ : ಚಲಿಸುತ್ತಿದ್ದ ರೈಲಿನಿಂದ ಯುವತಿವೋರ್ವಳು ಆಕಸ್ಮಿಕವಾಗಿ ತುಂಗಾ ನದಿಗೆ ಬಿದ್ದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇಂದು ಆಕೆಯ ಮೃತದೇಹ ಪತ್ತೆಯಾಗಿದೆ.
![Sahana](https://etvbharatimages.akamaized.net/etvbharat/prod-images/9541962_vicks.jpg)
ಸಹನಾ(24) ಎಂಬ ಯುವತಿ ನದಿಗೆ ಬಿದ್ದು ಮೃತರಾಗಿರುವ ದುರ್ದೈವಿ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಿಎ ಪರೀಕ್ಷೆ ಬರೆಯಲು ತನ್ನ ತಾಯಿಯ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಯುವತಿ ರೈಲಿನ ಬಾಗಿಲ ಬಳಿ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾಳೆ. ಘಟನೆ ನಡೆದು 36 ಗಂಟೆಗಳ ಬಳಿಕ ಇದೀಗ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ನದಿಗೆ ಬಿದ್ದ ಯುವತಿ: ಮುಂದುವರೆದ ಶೋಧ ಕಾರ್ಯ
ಯುವತಿ ಆಯತಪ್ಪಿ ಬಿದ್ದ ಸ್ಥಳದಿಂದ 1ಕಿ.ಮೀ ದೂರದಲ್ಲಿ ಆಕೆಯ ಶವ ಪತ್ತೆಯಾಗಿದೆ. ಅಗ್ನಿಶ್ಯಾಮಕ ದಳ ಹಾಗೂ ಮೀನುಗಾರರ ಸಹಾಯದಿಂದ ಶವವನ್ನು ನದಿಯಿಂದ ಹೊರ ತೆಗೆಯಲಾಗಿದೆ.