ಶಿವಮೊಗ್ಗ: ಶಂಕಿತ ಉಗ್ರರಾದ ಮಾಝ್ ಹಾಗೂ ಸೈಯ್ಯದ್ ಯಾಸೀನ್ ಅವರನ್ನು ಶಿವಮೊಗ್ಗದ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಉಗ್ರ ಚಟುವಟಿಕೆ, ಬಾಂಬ್ ತಯಾರಿಸಿ ಬ್ಲಾಸ್ಟ್ ನಡೆಸಿ, ರಾಷ್ಟ್ರಧ್ವಜ ಸುಟ್ಟ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯುಎಪಿ ಕಾಯ್ದೆಯಡಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಶಂಕಿತ ಉಗ್ರರಾದ ಮಾಝ್ ಹಾಗೂ ಯಾಸೀನ್ ಅವರನ್ನು ಸೆಪ್ಟೆಂಬರ್ 20 ರಂದು ಬಂಧನ ಮಾಡಲಾಗಿತ್ತು. ನಂತರ ಸೆಪ್ಟೆಂಬರ್ 27 ರ ತನಕ ಪೊಲೀಸ್ ಕಸ್ಟಡಿ ನೀಡಲಾಗಿತ್ತು. 27 ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ಸೆಪ್ಟೆಂಬರ್ 30ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ಇಂದಿನಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಿದೆ.
ಇದನ್ನೂ ಓದಿ : ಶಿವಮೊಗ್ಗ: ಶಂಕಿತ ಉಗ್ರರಿಬ್ಬರು ಸೆಪ್ಟೆಂಬರ್ 30 ರ ತನಕ ಪೊಲೀಸ್ ಕಸ್ಟಡಿಗೆ