ETV Bharat / state

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ: ಬಾಲಚಂದ್ರ ಜಾರಕಿಹೊಳಿಗೆ ಬಿ.ವೈ.ರಾಘವೇಂದ್ರ ಅಭಿನಂದನೆ - Shikaripur in Shimoga district

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ರೈತರು ಬೆಳೆದಿರುವ ಮೆಕ್ಕೆಜೋಳವನ್ನು 'ಗುಬ್ಬಿ ಪಶು ಆಹಾರ ಘಟಕ' ಪ್ರತಿ ಕ್ವಿಂಟಾಲ್‍ಗೆ 1,520 ರೂಪಾಯಿ(ಎರಡು ಗೋಣಿ ಚೀಲದ ಬಾಬ್ತು ರೂ. 20/- ಸೇರಿ) ದರದಲ್ಲಿ ಖರೀದಿಸಲು ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆದೇಶ ಹೊರಡಿಸಿದ್ದಾರೆ.

Support price for maize declared: B. Y. Raghavendra Congratules
ಮೆಕ್ಕೆಜೋಳಕ್ಕೆ ಬೆಂಬಲಬೆಲೆ ಘೋಷಣೆ: ಬಿ. ವೈ. ರಾಘವೇಂದ್ರ ಅಭಿನಂದನೆ
author img

By

Published : Dec 24, 2020, 6:13 PM IST

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ರೈತರು ಬೆಳೆದಿರುವ ಮೆಕ್ಕೆಜೋಳವನ್ನು 'ಗುಬ್ಬಿ ಪಶು ಆಹಾರ ಘಟಕ' ಪ್ರತಿ ಕ್ವಿಂಟಾಲ್‍ಗೆ 1,520 ರೂಪಾಯಿ(ಎರಡು ಗೋಣಿಚೀಲದ ಬಾಬ್ತು ರೂ.20/- ಸೇರಿ) ದರದಲ್ಲಿ ಖರೀದಿಸಲು ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆದೇಶ ಹೊರಡಿಸಿದ್ದಾರೆ.

ಒಬ್ಬ ರೈತ ಪ್ರತಿ ಎಕರೆಗೆ ಗರಿಷ್ಠ 20 ಕ್ವಿಂಟಾಲ್‍ಗೆ ಮೀರದಂತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 50 ಕ್ವಿಂಟಾಲ್‍ಗೆ ಮೀರದಂತೆ ಮೆಕ್ಕೆಜೋಳ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದ್ದು, ಮೆಕ್ಕೆಜೋಳ ಬೆಳೆದ ರೈತರು ಈ ಸದಾವಕಾಶವನ್ನು ಬಳಸಿಕೊಳ್ಳುವಂತೆ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ಮೆಕ್ಕೆಜೋಳ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೆ ಆರ್ಥಿಕವಾಗಿ ತೊಂದರೆಯಾಗುತ್ತಿರುವುದನ್ನು ಗಮನಿಸಿ ಮೆಕ್ಕೆಜೋಳವನ್ನು ಪಶು ಆಹಾರ ಘಟಕಗಳಲ್ಲಿ ಬೆಂಬಲ ಬೆಲೆ ಘೋಷಿಸಿ ಖರೀದಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಆದೇಶವನ್ನು ಹೊರಡಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಸತೀಶ್‍ ಅವರಿಗೆ ಮೆಕ್ಕೆಜೋಳ ರೈತರ ಪರವಾಗಿ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.