ETV Bharat / state

ಮೊಬೈಲ್ ಹೆಚ್ಚು ಬಳಸಬೇಡ ಎಂದು ಅಪ್ಪ ಹೇಳಿದ್ದೇ ತಪ್ಪಾಯ್ತಾ?... ಶವವಾಗಿ ಮಗ ಪತ್ತೆ - ಮೊಬೈಲ್ ಹೆಚ್ಚು ಬಳಸಬೇಡ ಎಂದು ಅಪ್ಪ ಹೇಳಿದ್ದೇ ತಪ್ಪಾಯ್ತಾ

ಭದ್ರಾವತಿ ತಾಲೂಕಿನಲ್ಲಿ ಪಿಯುಸಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೊಬೈಲ್ ಬಳಸಬೇಡ ಎಂದು ತಂದೆ ಹೇಳಿದ್ದಕ್ಕೆ ವಿದ್ಯಾರ್ಥಿ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ.

student-dead-body-found-in-shivamogga
ಮೊಬೈಲ್ ಹೆಚ್ಚು ಬಳಸಬೇಡ ಎಂದು ಅಪ್ಪ ಹೇಳಿದ್ದೇ ತಪ್ಪಾಯ್ತಾ?... ಶವವಾಗಿ ಮಗ ಪತ್ತೆ
author img

By

Published : Sep 8, 2022, 9:21 PM IST

Updated : Sep 9, 2022, 3:02 PM IST

ಶಿವಮೊಗ್ಗ: ಕಳೆದ ಒಂದು ವಾರದಿಂದ ಕಾಣೆಯಾಗಿದ್ದ ಪಿಯುಸಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ಭದ್ರಾವತಿ ತಾಲೂಕು ಬಿ.ಆರ್.ಪ್ರಾಜೆಕ್ಟ್​ನಲ್ಲಿ ನಡೆದಿದೆ. ಯಶವಂತ (16) ಮೃತ ವಿದ್ಯಾರ್ಥಿ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ನಿವಾಸಿ ಸುರೇಶ್ ಎಂಬುವರ ಮಗ ಯಶವಂತ ನ್ಯಾಶನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದನು.

ಕಳೆದ ಶನಿವಾರ 3 ರಂದು ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಯಶವಂತ ಮನೆಗೆ ವಾಪಸ್ ಆಗಿರಲಿಲ್ಲ.‌ ಯಶವಂತ ತಂದೆ ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಆದರೆ, ಇಂದು ಯಶವಂತನ ಶವ ಬಿ.ಆರ್.ಪ್ರಾಜೆಕ್ಟ್ ಬಳಿಯ ಭದ್ರಾ ಕಾಲುವೆಯಲ್ಲಿ ಪತ್ತೆಯಾಗಿದೆ.

ತಂದೆಯ ಬುದ್ಧಿ ಮಾತಿಗೆ ಬೇಜಾರು?: ಯಶವಂತ ಕಾಲೇಜಿಗೆ ಮಾಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದ. ಹೆಚ್ಚಾಗಿ ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದ್ರಂತೆ. ಇದರಿಂದಲೇ ಯಶವಂತ ಮನೆ ಬಿಟ್ಟು ಹೋಗಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

(ಇದನ್ನೂ ಓದಿ: ಪಿಟ್‌ಬುಲ್ ಶ್ವಾನ ದಾಳಿ.. ಬಾಲಕನ ಮುಖ ಮತ್ತು ಕಿವಿ ಭಾಗಕ್ಕೆ 150ಕ್ಕೂ ಹೆಚ್ಚು ಹೊಲಿಗೆ)

Last Updated : Sep 9, 2022, 3:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.