ETV Bharat / state

ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿ

ಹೊಸ ವರ್ಷಾಚರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿ- ಸರ್ಕಾರಿ‌ ನಿಯಮ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಖಡಕ್ ಸೂಚನೆ- ಎಸ್​ಪಿ ಮಾಹಿತಿ

Strict guidelines are enforced in Shimoga city
ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆ ಕಟ್ಟು ನಿಟ್ಟಿನ ಮಾರ್ಗಸೂಚಿ ಜಾರಿ
author img

By

Published : Dec 31, 2022, 8:50 PM IST

ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ: ಹೊಸ ವರ್ಷಾಚರಣೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸ್​ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಡಿ.31 ರ ರಾತ್ರಿ ಶಿವಮೊಗ್ಗದಾಂದ್ಯತ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯು ಸರ್ಕಾರಿ‌ ನಿಯಮ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲನೆಗೆ ಖಡಕ್ ಸೂಚನೆ ನೀಡಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಅವರು ಮಾರ್ಗಸೂಚಿಯಂತೆ ನಿಯಮ ಪಾಲನೆ ಮಾಡುವಂತೆ ಈಗಾಗಲೇ ತಮ್ಮ ಸಿಬ್ಬಂದಿಗಳ ಜೊತೆ ಹಾಗೂ ಹೋಟೆಲ್, ಕ್ಲಬ್, ರೆಸಾರ್ಟ್ ಸೇರಿದಂತೆ ಆಯೋಜಕರ ಜೊತೆ ಸಭೆ ನಡೆಸಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದಾರೆ.

ಹೊಸ ವರ್ಷಾಚರಣೆ ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ: ನಗರದಲ್ಲಿ ಹೊಸ ವರ್ಷಾಚರಣೆಯನ್ನು ಡಿಸಂಬರ್ 31ರ ಮಧ್ಯರಾತ್ರಿ 1 ಗಂಟೆ ಒಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳ ಸಂಬವಿಸದಂತೆ ನೋಡಿಕೊಳ್ಳಲು ಪೊಲೀಸ್​ ಇಲಾಖೆ ಸಜ್ಜಾಗಿದೆ.

ಆಯೋಜಕರು ಮುಂಜಾಗ್ರತ ಕ್ರಮ ವಹಿಸಬೇಕು: ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಗಾಗಿ ಮುಂಜಾಗ್ರತ ಕ್ರಮವನ್ನು ಆಯೋಜಕರು ತೆಗೆದುಕೊಳ್ಳಬೇಕು ಎಂದು ಪೊಲೀಸ್​ ಇಲಾಖೆ ಸೂಚನೆ ನೀಡಿದೆ.

ಹೊಸ ವರ್ಷಾಚರಣೆಯ ಮಾರ್ಗಸೂಚಿಗಳು: ಯಾವುದೇ ಮಾದಕ ವಸ್ತುಗಳನ್ನು ಬಳಸಬಾರದು, ಮದ್ಯ ಮಾರಾಟಕ್ಕೆ 11:30 ತನಕ ಅವಕಾಶ ನೀಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಚಾಲನೆ ಮಾಡುವಂತಿಲ್ಲ, ನಿಗದಿತ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂಗಳನ್ನು ಬಳಸುವಂತಿಲ್ಲ, ಸಂಭ್ರಮಾಚರಣೆಗೆ ಬರುವವರಿಗೆ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಹೋಟೆಲ್, ಕ್ಲಬ್, ರೇಸಾರ್ಟ್ ಗಳಲ್ಲಿ ಆಯೋಜನಕರುಗಳು ಸಂಭ್ರಮಾಚರಣೆ ಮಾಡುವ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚಿನ ಬಾಗಿಲುಗಳನ್ನು ತೆರೆಯಬೇಕು.

ಇನ್ನು ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗುವ ಎಲ್ಲರೂ ಕೋವಿಡ್ ನಿಯಮಾವಳಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಇತರೆ ಕೋವಿಡ್​ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

ಮಾಸ್ಕ್ ಇಲ್ಲದವರಿಗೆ ಅವಕಾಶ ನೀಡಬಾರದು: ಕೋವಿಡ್​ ನಿಯಮಗಳ ಉಲ್ಲಂಘಿಸಿದವರನ್ನು ಮತ್ತು ಮಾಸ್ಕ್​ ಬಳಸದವರನ್ನು ಆಯೋಜಕರು ವರ್ಷಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮಾರ್ಗಸೂಚಿ ಹೊರಡಿಸಿರುವ ಪೊಲೀಸ್ ಇಲಾಖೆ ಇಂದು ರಾತ್ರಿ 8 ಗಂಟೆಯಿಂದಲೇ ನಗರದಾದ್ಯಂತ ಪೆಟ್ರೊಲಿಂಗ್ ಮಾಡಲಿದ್ದಾರೆ. ನಗರದ ಪ್ರತಿ ಗಲ್ಲಿ, ಓಣಿಯಲ್ಲೂ ಗಸ್ತು ತಿರುಗುತ್ತಾರೆ. ಕುಡಿದು ವಾಹನ ಚಾಲಿಸುವವರ ತಪಾಸಣೆಯನ್ನು ಮಾಡುವುದಾಗಿ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಾಚರಣೆ: ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಬಂದ್

ಇನ್ನು ಶಿವಮೊಗ್ಗ ನಗರದ ಸೇರಿದಂತೆ ಜಿಲ್ಲಾಯಾದ್ಯಾಂತ ಹಲವು ಕಡೆ ಆಯೋಜಕರು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪಾರ್ಟಿಗಳನ್ನು ಆಯೋಜಿಸಿದ್ದು. ಇದಕ್ಕಾಗಿ ಅವರು ವಿಶೇಷ ಪ್ಯಾಕೇಜ್ ಸೇರಿದಂತೆ ವಿವಿಧ ಗೇಮ್ ಗಳನ್ನು ಆಯೋಜಿಸಿದ್ದಾರೆ.

ವಿಶೇಷ ಸಂಗೀತ. ನೃತ್ಯ ಸೇರಿದಂತೆ ಪ್ರಮುಖ ಗಾಯಕರನ್ನು ನಗರಕ್ಕೆ ಕರೆಯಿಸಿದ್ದಾರೆ. ಡಿಜೆ, ಹಾಸ್ಯ ಸಂಜೆಯನ್ನು ನಡೆಸಲಾಗುತ್ತಿದೆ. ಅಲ್ಲದೆ ವಿಶೇಷ ಭೋಜನದ ವ್ಯವಸ್ಥೆಯನ್ನು ಸಹ ಆಯೋಜಿಸಿದ್ದು, ದೇಶ ವಿದೇಶದ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದೆ ಎನ್ನುತ್ತಾರೆ ಆಯೋಜಕರಾದ ಬಾಬು ಶಾಹಬಾದ್​ ಒಟ್ಟಾರೆ ಪೊಲೀಸ್ ಇಲಾಖೆಯ ವಿಶೇಷ ಗೈಡ್ ಲೈನ್ಸ್ ಜೊತೆಗೆ ಹೊಸ ವರ್ಷಾಚರಣೆ ಮಾಡಲು ಜಿಲ್ಲೆ ಜನತೆ ಸಿದ್ಧರಾಗಿದ್ದಾರೆ.

ಇದನ್ನೂ ಓದಿ:ಹೊಸ ವರ್ಷಕ್ಕೆ ಭಾವೈಕ್ಯತೆ ಸಾರುವ ಕೇಕ್​​ಗಳು.. ಬೆಣ್ಣೆನಗರಿ ಜನರ ಗಮನಸೆಳೆದ ಮಂದಿರ‌ ಮಸೀದಿ ಚರ್ಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.