ETV Bharat / state

ಜಿಲೆಟಿನ್​ ಬ್ಲಾಸ್ಟ್ ಪ್ರಕರಣದ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಕಾರಜೋಳ - Strict action against the wrongdoers

ಕಲ್ಲು ಗಣಿಗಾರಿಕೆ ಸಮಯದಲ್ಲಿ ಜಿಲೆಟಿನ್ ಸ್ಫೋಟ ಮಾಡುವುದಕ್ಕೆ ಲೈಸನ್ಸ್​​ ಹೂಂದಿರಬೇಕು ಹಾಗೂ ಸುರಕ್ಷಿತವಾಗಿ ಸಂಗ್ರಹಿಸುವ ಎಚ್ಚರಿಕೆ ವಹಿಸಬೇಕು. ಈ ಕುರಿತು ಹಲವು ಬಾರಿ ಸೂಚನೆ ಕೂಟ್ಟರೂ ಸಹ ಕೆಲ ಮಾಲೀಕರು, ಕಾರ್ಮಿಕರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಡಿಸಿಎಂ ಕಾರಜೋಳ
ಡಿಸಿಎಂ ಕಾರಜೋಳ
author img

By

Published : Jan 22, 2021, 7:31 PM IST

ಬಾಗಲಕೋಟೆ: ಜಿಲೆಟಿನ್ಬ್ಲಾಸ್ಟ್ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ, ಯಾರೇ ತಪ್ಪಿಸ್ಥರು ಇದ್ದರೂ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣ ಉದ್ಘಾಟನೆ ನಂತರ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸ್ಫೋಟ ಪ್ರಕರಣ ದೊಡ್ಡ ದುರಂತವಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಧನ ನೀಡಲಾಗುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣ ಉದ್ಘಾಟನೆಯಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ

ಕಲ್ಲು ಗಣಿಗಾರಿಕೆ ಸಮಯದಲ್ಲಿ ಜಿಲೆಟಿನ್ ಸ್ಫೋಟ ಮಾಡುವುದಕ್ಕೆ ಲೈಸನ್ಸ್​​ ಹೂಂದಿರಬೇಕು ಹಾಗೂ ಸುರಕ್ಷಿತವಾಗಿ ಸಂಗ್ರಹಿಸುವ ಎಚ್ಚರಿಕೆ ವಹಿಸಬೇಕು. ಈ ಕುರಿತು ಹಲವು ಬಾರಿ ಸೂಚನೆ ಕೂಟ್ಟರೂ ಸಹ ಕೆಲ ಮಾಲೀಕರು, ಕಾರ್ಮಿಕರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದೇ ಸಮಯದಲ್ಲಿ ಖಾತೆ ಹಂಚಿಕೆ ನಂತರ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ‌ನೀಡಿದ ಅವರು, ಯಾವುದೇ ಭಿನ್ನಮತವಾಗಿಲ್ಲ. ಖಾತೆ ಹಂಚಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು‌ ನಿಭಾಯಿಸುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.