ETV Bharat / state

ರಾಜ್ಯ ಸರ್ಕಾರ ಎಚ್ಚೆತ್ತು ಇನ್ನಾದರೂ ಕಾವೇರಿ ನೀರು ಕುಡಿಯಲು ಉಳಿಸಬೇಕಿದೆ: ಬಿ ವೈ ರಾಘವೇಂದ್ರ - ರಾಜ್ಯ ಸರ್ಕಾರ

ಕಾವೇರಿ ನೀರಿನ ವಿವಾದ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದ್ರೆ, ಸುಪ್ರೀಂ ಕೋರ್ಟ್​ನಲ್ಲಿ ಹಿನ್ನಡೆ ಅನುಭವಿಸುತ್ತಿರಲಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

MP B Y Raghavendra spoke at the press conference.
ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Sep 23, 2023, 6:03 PM IST

Updated : Sep 23, 2023, 9:00 PM IST

ಸಂಸದ ಬಿ ವೈ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ: ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಉಳಿಸಬೇಕಿದೆ ಎಂದು ಸಂಸದ ಬಿ ವೈರಾಘವೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ಮೊದಲು ಕೊಟ್ಟು, ಕಾಂಗ್ರೆಸ್​ ಮುಖಂಡರು ಈಗ ಸಂಸತ್ ಸದಸ್ಯರ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ದ್ವಂದ್ವ ನೀತಿ ಅನುರಿಸುತ್ತಿದೆ. ಕಾವೇರಿ ವಿವಾದ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದ್ರೆ, ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ ಅನುಭವಿಸುತ್ತಿರಲಿಲ್ಲ. ಈಗ ಕೈ ಮೀರಿದ ಪರಿಸ್ಥಿತಿಯಲ್ಲಿ ಕೇಂದ್ರದ ಜಲ‌ಸಂಪನ್ಮೂಲ ಸಚಿವ ಶೇಖಾವತ್ ಅವರನ್ನು ಭೇಟಿ ಮಾಡಲು ಬಂದಿದ್ದು, ಸರ್ವ ಪಕ್ಷ ನಿಯೋಗ ಕರೆ ತಂದಿದ್ದು ಇರಬಹುದು ಇವೆಲ್ಲ ತಡವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಲಿ: ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. 45 ಟಿಎಂಸಿ ಕುಡಿಯುವ ನೀರು ಬೆಂಗಳೂರಿಗೆ ಬೇಕಾಗುತ್ತದೆ. ಕೃಷಿಗೆ ಬೇಕಾಗುತ್ತದೆ. ಈಗಲಾದರೂ ಸಹ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಮೋದಿ ಅವರನ್ನು ಟೀಕಿಸುವ ಸಿದ್ದರಾಮಯ್ಯನವರು ತಮಿಳುನಾಡು ಸಿಎಂ ಬಳಿ ಹೋಗಿ ನಮ್ಮ ಪರಿಸ್ಥಿತಿಯನ್ನು ವಿವರಿಸಿ ನೀರು ಬಿಡಲ್ಲ ಎಂದು ತಿಳಿಸಬೇಕಿದೆ ಎಂದು ಹೇಳಿದರು.

ಸಂಸತ್ತಿನ ಹೊಸ ಹಾಗೂ ಹಳೆಯ ಎರಡೂ ಭವನಗಳಲ್ಲೂ ಕೆಲಸ ಮಾಡುವ ಮತ್ತು ಸದನಗಳ ಕಲಾಪಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟ ಶಿವಮೊಗ್ಗ ಕ್ಷೇತ್ರದ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದರು.

ಮಹಿಳಾ ಮೀಸಲಾತಿ ಮೋದಿ ಸಾಧನೆ: ನಾರಿ ಶಕ್ತಿ ವಿಧೇಯಕದ ಮೂಲಕ ಶಾಸನ ಸಭೆಗಳಲ್ಲಿ ಕನಿಷ್ಠ 3ನೇ ಒಂದು ಭಾಗದಷ್ಟು ಪಾಲು ಮಹಿಳೆಯರಿಗೆ ಸಿಗಲೇಬೇಕು ಎಂಬ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸತ್ ಸದಸ್ಯರೆಲ್ಲರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಎಷ್ಟೇ ಯತ್ನ ಮಾಡಿದರೂ, ಅದು ಬಹುಮತ ಇಲ್ಲದ ಕಾರಣಕ್ಕೆ ಯಶಸ್ವಿಯಾಗಿರಲಿಲ್ಲ. ಈಗ ಮೋದಿ ಅವರು ಮಸೂದೆಯನ್ನು ಜಾರಿ ಮಾಡಲು ಯಶಸ್ವಿಯಾಗಿದ್ದಾರೆ ಎಂದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್ ಹಾಗೂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ :ಕಾಂಗ್ರೆಸ್ ನಾಯಕರು ತಮಿಳುನಾಡು ಏಜೆಂಟ್​ರಂತೆ ವರ್ತಿಸುತ್ತಿದ್ದಾರೆ: ಬಿ ಎಸ್ ಯಡಿಯೂರಪ್ಪ

Last Updated : Sep 23, 2023, 9:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.