ಶಿವಮೊಗ್ಗ : ನಗರದ ಶಿವಪ್ಪನಾಯಕ ಬಡಾವಣೆಯ ನಿವಾಸಿ ಶಬರಿ ಅವರು ಇಂದು ತಮ್ಮ ಮನೆಯ ಟಾಯ್ಲೆಟ್ಗೆ ಹೋದಾಗ ಗಾಬರಿಯಾಗಿ ಓಡಿ ಹೊರಗೆ ಬಂದಿದ್ದಾರೆ.
ಕಾರಣ, ಟಾಯ್ಲೆಟ್ ಪಿಟ್ನಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ತಕ್ಷಣ ಸ್ನೇಕ್ ಕಿರಣ್ಗೆ ಫೋನ್ ಮಾಡಿದ್ದಾರೆ. ಸ್ನೇಕ್ ಕಿರಣ್ ಬಂದು ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್ನಿಂದ ತೆಗೆದು ಹೊರಗೆ ತಂದಿದ್ದಾರೆ.
ಓದಿ: ಬಿಜೆಪಿ ಜನಪ್ರತಿನಿಧಿಗೆ ಮಹಿಳಾ ಅಧಿಕಾರಿಯಿಂದ ಏಕವಚನದಲ್ಲೇ ಆವಾಜ್ ಆರೋಪ.. ಗಂಗಾವತಿಯಲ್ಲಿ ಆಡಿಯೋ ವೈರಲ್!
ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಮಂಗಳರಾತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತ್ರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗಪ್ಪ ಮನೆಯಿಂದ ಹೊರ ಹೋದ ಬಳಿಕ ಶಬರಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.