ETV Bharat / state

ಶಿವಮೊಗ್ಗದ ಡಿವಿಎಸ್​ ಕಾಲೇಜಿನಲ್ಲಿ ಹತ್ತನೇ ತರಗತಿ ಮುಗಿಸಿದ ಕಾಫಿ ಡೇ ಮಾಲೀಕ ಸಿದ್ಧಾರ್ಥ - ಪೂರ್ಣಚಂದ್ರ ತೇಜಸ್ವಿ

ಕಾಫಿ ಡೇ ಮಾಲೀಕ ಸಿದ್ಧಾರ್ಥ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಡಿವಿಎಸ್ ಕಾಲೇಜಿನಲ್ಲಿ, 1974-75ರ ಶೈಕ್ಷಣಿಕ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ವಿಷಯ ಇತ್ತೀಚೆಗೆ ಆಡಳಿತ ಮಂಡಳಿಗೆ ಗೊತ್ತಾಗಿದ್ದು, ಅವರು ಸಹ ದುಃಖಿತರಾಗಿದ್ದಾರೆ.

ಡಿವಿಎಸ್ ಶಾಲೆ
author img

By

Published : Jul 31, 2019, 5:28 PM IST

ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ದೇಶಿಯ ವಿದ್ಯಾ‌ ಶಾಲೆಯ ಹೈಸ್ಕೂಲ್​​ನ 1974-75ರ ಶೈಕ್ಷಣಿಕ ಸಾಲಿನಲ್ಲಿ ಸಿದ್ಧಾರ್ಥರವರು ಹತ್ತನೆ ತರಗತಿಯನ್ನು ಓದಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಎಂಟು ಮತ್ತು ಒಂಭತ್ತನೆ ತರಗತಿಯನ್ನು ಚಿಕ್ಕಮಗಳೂರಿನಲ್ಲಿ ಓದಿ, ನಂತ್ರ ಹತ್ತನೇ ತರಗತಿಗೆ ಶಿವಮೊಗ್ಗಕ್ಕೆ ಬಂದಿದ್ದರು. ತಮ್ಮ ಸಂಬಂಧಿಕರ ಮನೆಯಲ್ಲಿಯೇ ಉಳಿದುಕೊಂಡು ಅವರು ಹತ್ತನೆ ತರಗತಿಯನ್ನು ಮುಗಿಸಿದ್ದಾರೆ. ಹತ್ತನೇ ತರಗತಿಯಲ್ಲಿ‌ 299 ಅಂಕಗಳನ್ನು ಗಳಿಸಿ, ಬಳಿಕ ಪಿಯುಸಿ ವಿದ್ಯಾಭ್ಯಾಸಕ್ಕೆ ಮತ್ತೆ ಚಿಕ್ಕಮಗಳೂರಿಗೆ ಹೋಗಿದ್ದರು.

ಸಿದ್ಧಾರ್ಥರವರು ಡಿವಿಎಸ್ ಶಾಲೆಯಲ್ಲಿ ಓದಿದ್ದರು ಎಂದು ಆಡಳಿತ ಮಂಡಳಿ ಹೇಳಿದೆ. ಇವರು ಶಾಲೆಗೆ ದಾಖಲಾದ ಬಗ್ಗೆ ಹಾಗೂ ಅವರು ತೆಗೆದುಕೊಂಡ ಅಂಕದ ಬಗ್ಗೆ ಶಾಲೆಯಲ್ಲಿ ದಾಖಲಾತಿ‌ ಲಭ್ಯವಿದೆ. ಸಿದ್ದಾರ್ಥ ಅವರೇ ಸಹಿ ಮಾಡಿದ ದಾಖಲಾತಿಗಳಿವೆ. ಇಂತಹ ಓರ್ವ ಮಹಾನ್​​ ವ್ಯಕ್ತಿ ತಮ್ಮ ಶಾಲೆಯಲ್ಲಿ ಓದಿದ್ದು ನಮಗೆ ಹೆಮ್ಮೆಯ ಸಂಗತಿ. ಈಗ ಸಿದ್ಧಾರ್ಥರವರ ಧಾರುಣ ಅಂತ್ಯ ನಿಜಕ್ಕೂ ಅಘಾತಕಾರಿಯಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ಭಗವಂತ ನೀಡಲಿ ಎನ್ನುತ್ತಾರೆ ಡಿವಿಎಸ್ ಉಪ ಪ್ರಾಚಾರ್ಯರಾದ ಲಕ್ಷಣ್.

ಶಿವಮೊಗ್ಗದ ಡಿವಿಎಸ್​ ಕಾಲೇಜು

ಇನ್ನು ರಾಷ್ಟ್ರಕವಿ ಕುವೆಂಪುರವರ ಸಮಾಧಿ ಇರುವ ಕುಪ್ಪಳ್ಳಿಯ ಕವಿಶೈಲಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರಕುವಂತೆ ಮಾಡಿದ್ದುಇದೇ ಸಿದ್ದಾರ್ಥರವರು. ಕುವೆಂಪುರವರ ಮಗ ಪೂರ್ಣಚಂದ್ರ ತೇಜಸ್ವಿ ಅವರ ಆದೇಶದ ಮೇರೆಗೆ ಸಿದ್ಧಾರ್ಥರವರು ಸುಮಾರು 50 ಲಕ್ಷ ರೂ.ಖರ್ಚು ಮಾಡಿ ಕಲ್ಲುಗಳನ್ನು ತರಿಸಿ, ಕವಿಶೈಲವನ್ನು ಉತ್ತಮವಾಗಿ ರೂಪಗೊಳ್ಳುವಂತೆ ಮಾಡಿದ್ದರು. ಇದನ್ನು ನಾನು ಮಾಡಿದ್ದು ಎಂದು ಯಾರಿಗೂ ಹೇಳಬೇಡಿ ಎಂದು ಹೇಳುವ ಮೂಲಕ ಪ್ರಚಾರದಿಂದ ದೂರ ಉಳಿದಿದ್ದರು.

ಅಲ್ಲದೇ ತೀರ್ಥಹಳ್ಳಿ ತಾಲೂಕು ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಬ್ಲಂಡ್ ಬ್ಯಾಂಕ್​​ ನಿರ್ಮಾಣ ಮಾಡಿಕೊಟ್ಟಿದ್ದು ಇವರೆ, ಇವರ ಜನನ ಇದೇ ಜೆ.ಸಿ ಆಸ್ಪತ್ರೆಯಲ್ಲಿ‌ ಆಗಿತ್ತು. ಇವರ ತಾಯಿ ತೀರ್ಥಹಳ್ಳಿ ತಾಲೂಕಿನ ಹೀರೆ ತೋಟದವರಾಗಿದ್ದ ಕಾರಣ ಸಿದ್ಧಾರ್ಥರವರಿಗೆ ಶಿವಮೊಗ್ಗ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಸಿದ್ಧಾರ್ಥರವರ ಸಂಬಂಧಿ ರಮೇಶ್ ಹೆಗ್ಡೆ

Intro:ಧಾರುಣ ಸಾವು ಕಂಡ ಉದ್ಯಮಿ ಸಿದ್ದಾರ್ಥ ರವರಿಗೂ‌ ಶಿವಮೊಗ್ಗಕ್ಕೂ ಅವಿನಭಾವ ಸಂಬಂಧವಿದೆ. ಸಿದ್ದಾರ್ಥ ರವರು ತಮ್ಮ ಹತ್ತನೆ ತರಗತಿಯನ್ನು ಶಿವಮೊಗ್ಗದಲ್ಲೆ ಓದಿ ಮುಗಿಸಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ದೇಶಿಯ ವಿದ್ಯಾ‌ ಶಾಲೆಯ ಹೈಸ್ಕೂಲ್ ನಲ್ಲಿ ತಮ್ಮ ಹತ್ತನೆ ತರಗತಿಯನ್ನು ಓದಿದ್ದಾರೆ. 1974-75 ನೇ ಶೈಕ್ಷಣಿಕ ಸಾಲಿನಲ್ಲಿ ಸಿದ್ದಾರ್ಥ ಓದಿದ್ದಾರೆ. ಇವರು ಎಂಟು ಮತ್ತು ಒಂಬತ್ತನೆ ತರಗತಿಯನ್ನು ಚಿಕ್ಕ ಮಂಗಳೂರಿನಲ್ಲಿ ಓದಿ ನಂತ್ರ ಹತ್ತನೆ ತರಗತಿಗೆ ಶಿವಮೊಗ್ಗಕ್ಕೆ ಬಂದಿದ್ದರು. ತಮ್ಮ ಸಂಬಂಧಿಕರ ಮನೆಯಲ್ಲಿ ಯೇ ಅವರು ಹತ್ತನೆ ತರಗತಿಯನ್ನು ಓದಿದ್ದರು.

Body:ಇವರು ಹತ್ತನೆ ತರಗತಿಯಲ್ಲಿ‌ 299 ಅಂಕಗಳನ್ನು ಗಳಿಸಿ ಪಾಸಾಗಿ ಪಿಯುಸಿ ವಿದ್ಯಾಭ್ಯಾಸಕ್ಕೆ ಮತ್ತೆ ಚಿಕ್ಕಮಗಳೂರಿಗೆ ಹೋಗಿದ್ದರು. ಸಿದ್ದಾರ್ಥ ರವರು ತಮ್ಮ ಡಿ.ವಿ.ಎಸ್. ಶಾಲೆಯಲ್ಲಿ ಓದಿದ್ದರು ಎಂದು ಆಡಳಿತ ಮಂಡಳಿಗೆ ಇತ್ತೀಚೆಗೆ ತಿಳಿದು ಬಂದಿದೆ. ಇವರು ಶಾಲೆಗೆ ದಾಖಲಾದ ಬಗ್ಗೆ ಹಾಗೂ ಅವರು ತೆಗೆದು ಕೊಂಡು ಅಂಕದ ಬಗ್ಗೆ ಶಾಲೆಯಲ್ಲಿ ದಾಖಲಾತಿ‌ ಲಭ್ಯವಿದೆ. ಸಿದ್ದಾರ್ಥರವರೆ ಸಹಿ ಮಾಡಿದ ದಾಖಲಾತಿಗಳಿವೆ. ಇಂತಹ ಓರ್ವ ಬಿಸನೆಸ್ ಮ್ಯಾನ್ ನಮ್ಮ ಶಾಲೆಯಲ್ಲಿ ಓದಿದ್ದು ಹಾಗೂ ಚಿಕ್ಕಮಗಳೂರಿನ ಅಂಬರ್ ವ್ಯಾಲಿ ಶಾಲೆಯನ್ನು ಕಟ್ಟ ಬೆಳೆಸಿದ ವ್ಯಕ್ತಿ ನಮ್ಮ ಕಾಲೇಜಿನಲ್ಲಿಯೇ ಓದಿದ್ದು ಎಂದು‌ ಪಾಠ ಮಾಡುವಾಗ ಮಕ್ಕಳಿಗೆ ಹೇಳಿತ್ತಾ ಇದ್ದೆವು. ಈಗ ಸಿದ್ದಾರ್ಥ ರವರ ದಾರುಣ ಅಂತ್ಯ ನಿಜಕ್ಕೂ ಅಘಾತಕಾರಿಯಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ಭಗವಂತ ನೀಡಲಿ ಎನ್ನುತ್ತಾರೆ ಡಿವಿಎಸ್ ಉಪ ಪ್ರಾಚಾರ್ಯರಾದ ಲಕ್ಷಣ್ ರವರು..

Conclusion:ಇನ್ನೂ ರಾಷ್ಟ್ರಕವಿ ಕುವೆಂಪು ರವರು ಸಮಾಧಿ ಇರುವ ಕುಪ್ಪಳ್ಳಿಯ ಕವಿಶೈಲಕ್ಕೆ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ದೂರಕುವಂತೆ ಮಾಡಿದ್ದು ಸಿದ್ದಾರ್ಥರವರು. ಕುವೆಂಪು ರವರ ಮಗ ಪೂರ್ಣಚಂದ್ರ‌ ತೇಜಸ್ವಿರವರ ಆದೇಶದ ಮೇರೆಗೆ ಸಿದ್ದಾರ್ಥರವರು ಸುಮಾರು 50 ಲಕ್ಷ ಖರ್ಚು ಮಾಡಿ ಕಲ್ಲುಗಳನ್ನು ತರಿಸಿ, ಕವಿಶೈಲವನ್ನು ಉತ್ತಮವಾಗಿ ರೂಪಗೊಳ್ಳುವಂತೆ ಮಾಡಿದ್ದರು. ಇದನ್ನು ನಾನು ಮಾಡಿದ್ದು ಎಂದು ಯಾರಿಗೂ ಹೇಳಬೇಡಿ ಎಂದು ಹೇಳುವ ಮೂಲಕ ಪ್ರಚಾರದಿಂದ ದೂರ ಉಳಿದಿದ್ದರು. ಅಲ್ಲದೆ ತೀರ್ಥಹಳ್ಳಿ ತಾಲೂಕು ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಬ್ಲಂಡ್ ಬ್ಯಾಂಕ್ ನ್ನು ನಿರ್ಮಾಣ ಕೊಟ್ಟಿದ್ದು ಇವರೆ, ಇವರ ಜನನ ಇದೇ ಜೆ.ಸಿ ಆಸ್ಪತ್ರೆಯಲ್ಲಿ‌ ಆಗಿತ್ತು. ಇವರ ತಾಯಿ ತೀರ್ಥಹಳ್ಳಿ ತಾಲೂಕಿನ ಹೀರೆ ತೋಟದವರಾಗಿದ್ದ ಕಾರಣ ಸಿದ್ದಾರ್ಥರವರಿಗೆ ಶಿವಮೊಗ್ಗ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಸಿದ್ದಾರ್ಥ ರವರ ಸಂಬಂಧಿ ರಮೇಶ್ ಹೆಗಡೆ ರವರು.

ಬೈಟ್: ಲಕ್ಷ್ಮಣ್. ಉಪ ಪ್ರಾಚಾರ್ಯರು. ಡಿವಿಎಸ್ ಸಂಸ್ಥೆ.

ಬೈಟ್: ರಮೇಶ್ ಹೆಗಡೆ. ಸಂಬಂಧಿ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.