ETV Bharat / state

ಬ್ಯಾಂಕ್​ನಲ್ಲಿ ಶಾರ್ಟ್ ಸರ್ಕ್ಯೂಟ್.. ಕಂಪ್ಯೂಟರ್ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ - #computer are burned

ಶಾರ್ಟ್​ ಸರ್ಕ್ಯೂಟ್​ ಹೇಗಾಯಿತು ಎಂಬುದರ ಬಗ್ಗೆ ನಿಖರ ಮಾಹಿತಿ ಗೊತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಕಿ
author img

By

Published : Jun 10, 2019, 9:57 AM IST

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಮೈಸೂರು ಕೆಫೆ ಹೋಟೆಲ್ ಮುಂಭಾಗದಲ್ಲಿ ಇರುವ ಸಿಂಡಿಕೇಟ್ ಬ್ಯಾಂಕ್​ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ಮೌಲ್ಯದ ಉಪಕರಣಗಳು ಭಸ್ಮವಾಗಿವೆ.

ಬ್ಯಾಂಕ್​ನಲ್ಲಿದ್ದ ಕಂಪ್ಯೂಟರ್, ಸ್ಕ್ಯಾನರ್​ಗಳು, ಪಾಸ್​ಬುಕ್ ಪ್ರಿಂಟರ್ ಸೇರಿದಂತೆ ವಿವಿಧ ಉಪಕರಣಗಳು ಸುಟ್ಟು ಕರಕಲಾಗಿವೆ. ಬ್ಯಾಂಕ್​ನ ಎಟಿಎಂ ಭದ್ರತಾ ಸಿಬ್ಬಂದಿ ಬ್ಯಾಂಕ್ ಮ್ಯಾನೇಜರ್​ಗೆ ತಕ್ಷಣ ಕರೆ ಮಾಡಿ ಈ ವಿಷಯ ಮುಟ್ಟಿಸಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯಕ್ಕೆ ಲಾಕರ್​ನಲ್ಲಿದ್ದ ದಾಖಲೆ ಪತ್ರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ಅಶೋಕ್, ಈಶ್ವರ್ ನಾಯ್ಕ್, ಅಬ್ದುಲ್​ ರಜಾಕ್, ಜೆ ರವಿ, ಸತೀಶ್, ಶ್ರೀನಿವಾಸ್ ಹಾಗೂ ಚಾಲಕ ಶಂಕರ್​ಗೌಡ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Intro:ಸಿಂಡಿಕೇಟ್ ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್:
ಕಂಪ್ಯೂಟರ್ ಸಹಿತ ಹಲವು ವಸ್ತುಗಳು ಸಂಪೂರ್ಣ ಭಸ್ಮ.

ಶಿವಮೊಗ್ಗ: ಸಾಗರ ಪಟ್ಟಣದ ಮೈಸೂರು ಕೆಫೆ ಹೋಟೆಲ್ ಮುಂಭಾಗದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನಲ್ಲಿ ನಿನ್ನೆ ರಾತ್ರಿ 2.30 ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ನಡೆದಿದೆ. Body:ಇದರಿಂದ ಬ್ಯಾಂಕ್ ಒಳ ಭಾಗದಲ್ಲಿರುವ ಕಂಪ್ಯೂಟರ್, ಸ್ಕ್ಯಾನರ್,ಪಾಸ್ ಬುಕ್ ಪ್ರಿಂಟರ್ ಹಾಗೂ ಇನ್ನಿತರ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬ್ಯಾಂಕ್ ನ ಎಟಿಎಮ್ ನ ಸೆಕ್ಯೂರಿಟಿ ಗಾರ್ಡ್ ಬ್ಯಾಂಕ್ ಮ್ಯಾನೇಜರ್ ಗೆ ತಕ್ಷಣ ಕರೆ ಮಾಡಿದ್ದಾರೆ. ತಕ್ಷಣ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇವರ ತುರ್ತು ಕಾರ್ಯಾಚರಣೆಗೆ ದೊಡ್ಡ ಅನಾಹುತವೊಂದು ತಪ್ಪಿದೆ‌.Conclusion:ಬ್ಯಾಂಕ್ ನ ಲಾಕರ್,ದಾಖಲಾತಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಬ್ಯಾಂಕ್ ವ್ಯವಸ್ಥಾಪಕ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ಅಶೋಕ್, ಈಶ್ವರ್ ನಾಯ್ಕ್,ಅಬ್ದುಲ ರಜಾಕ್, ಜೆ.ರವಿ,ಸತೀಶ್, ಶ್ರೀನಿವಾಸ್ ಹಾಗೂ ಚಾಲಕ ಶಂಕರ್ ಗೌಡ ಪಾಲ್ಗೊಂಡಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.