ETV Bharat / state

ಅಪ್ಪು ಅಭಿಮಾನಿಗಳಿಂದ ಶಿವಮೊಗ್ಗ-ಬೆಂಗಳೂರು ಸೈಕಲ್ ಜಾಥಾ - ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಸೈಕಲ್​ ಜಾಥಾ

ಅಪ್ಪು ಸಮಾಧಿ ದರ್ಶನ ಪಡೆಯಬೇಕು ಎಂದು ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಇಬ್ಬರು ಯುವಕರು ಸೈಕಲ್​ ಜಾಥಾ ಪ್ರಾರಂಭಿಸಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರು ವರೆಗೆ ಸೈಕಲ್ ಜಾಥಾ
ಶಿವಮೊಗ್ಗದಿಂದ ಬೆಂಗಳೂರು ವರೆಗೆ ಸೈಕಲ್ ಜಾಥಾ
author img

By

Published : Mar 4, 2022, 9:26 AM IST

ಶಿವಮೊಗ್ಗ: ನಟ ಪುನೀತ್ ರಾಜಕುಮಾರ್ ಸಮಾಧಿ ದರ್ಶನಕ್ಕೆ ಇಬ್ಬರು ಅಭಿಮಾನಿಗಳು ಶಿವಮೊಗ್ಗದಿಂದ ಸೈಕಲ್ ಜಾಥಾ ಆರಂಭಿಸಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಈ ಜಾಥಾ ನಡೆಯಲಿದೆ.

ಮೆಸ್ಕಾಂ ಎಂಜಿನಿಯರ್ ನಂಜುಂಡಿ ಮತ್ತು ಸ್ವರೂಪ್ ಎಂಬ ಇಬ್ಬರು ಯುವಕರು ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಗುರುವಾರ ಜಾಥಾ ಆರಂಭಿಸಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರುವರೆಗೆ ಸೈಕಲ್ ಜಾಥಾ

ಅಪ್ಪು ಫೋಟೋ ಹೊತ್ತು ಯಾತ್ರೆ: ನಂಜುಂಡಿ ಮತ್ತು ಸ್ವರೂಪ್ ಅವರು ನಟ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಗಳು. ಅಪ್ಪು ಅವರ ಸಮಾಧಿ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಈ ಇಬ್ಬರು ಯುವಕರು ಸೈಕಲ್ ಹತ್ತಿ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.

ಸೈಕಲ್ ಮುಂಭಾಗ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇರಿಸಿಕೊಂಡಿದ್ದಾರೆ. ಬೆಂಗಳೂರು ತಲುಪಿದ ಬಳಿಕ ಅಪ್ಪು ಸಮಾಧಿ ದರ್ಶನ ಪಡೆಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.