ಶಿವಮೊಗ್ಗ: 24x7 ಕುಡಿಯುವ ನೀರನ್ನು ಒದಗಿಸುತ್ತಿರುವ ರಾಜ್ಯದ ಮೊದಲ ಜಿಲ್ಲೆ ಶಿವಮೊಗ್ಗವಾಗಿದೆ ಎಂದು ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಭಾನುವಾರ ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಪ್ರತಿ ದಿನ ಕುಡಿವ ನೀರನ್ನು ಒದಗಿಸುತ್ತಿರುವ ಜಿಲ್ಲೆ ನಮ್ಮದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗಾಜನೂರು ಡ್ಯಾಂನಿಂದ ಶುದ್ಧ ಕುಡಿವ ನೀರಿನ ಪೂರೈಕೆಗಾಗಿ 105 ಕೋಟಿ ರೂ.ನ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದರು. ಇನ್ನೂ ಶಿವಮೊಗ್ಗ ನಗರದ ಎರಡು ವಾರ್ಡ್ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದನ್ನು ಗಮನಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಈ ಸಮಸ್ಯೆ ಒಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಗಂಗಾ ಯೋಜನೆ ಜಾರಿ ಮಾಡಿದಾಗ ಎಲ್ಲರೂ ವಿರೋಧಿಸುತ್ತಿದ್ದರು. ಈಗ ಈ ಯೋಜನೆಯಿಂದ ಅರ್ಧದಷ್ಟು ನೀರು ಉಳಿತಾಯವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಆನೇಕಲ್: ಅಕ್ರಮವಾಗಿ ಜಾನುವಾರುಗಳನ್ನು ಸಂಗ್ರಹಿಸಿದ ಶೆಡ್ಗಳ ಮೇಲೆ ಅಧಿಕಾರಿಗಳ ದಾಳಿ