ETV Bharat / state

ಶಿವಮೊಗ್ಗ ವಿಧಾನಸಭಾ ಚುನಾವಣೆ 2023: ಅಂತಿಮ ಕಣದಲ್ಲಿ 74 ಅಭ್ಯರ್ಥಿಗಳು - ಶಿವಮೊಗ್ಗದ ಕೇಂದ್ರ ಕಾರಾಗೃಹ

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಶಿವಮೊಗ್ಗ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2023ರ ವಿಧಾನಸಭಾ ಚುನಾವಣೆಯ ಅಂತಿಮ‌ ಕಣದಲ್ಲಿ ಜಿಲ್ಲೆಯಲ್ಲಿ 74 ಅಭ್ಯರ್ಥಿಗಳು‌ ಪೈಪೋಟಿ ನಡೆಸಲಿದ್ದಾರೆ.

Shivamogga assembly elections 2023
ಶಿವಮೊಗ್ಗ ವಿಧಾನಸಭಾ ಚುನಾವಣೆ 2023
author img

By

Published : Apr 25, 2023, 7:41 AM IST

ಶಿವಮೊಗ್ಗ: 2023ರ ವಿಧಾನಸಭಾ ಚುನಾವಣೆಯ ಅಂತಿಮ‌ ಕಣದಲ್ಲಿ ಜಿಲ್ಲೆಯಲ್ಲಿ 74 ಅಭ್ಯರ್ಥಿಗಳು‌ ಉಳಿದುಕೊಂಡಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನಿನ್ನೆ(ಏ.24) ಅಂತಿಮ ದಿನವಾಗಿತ್ತು. ಸುಮಾರು 10 ಜನ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಇದರಿಂದ 74 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಕ್ಷೇತ್ರವಾರು ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಹೀಗಿದೆ..

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ ವಿಜಯ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ನ ಶ್ರೀನಿವಾಸ್ ಎಸ್. ಕೆ, ಆಮ್‍ ಆದ್ಮಿ ಪಾರ್ಟಿಯ ಮಂಜುನಾಥ ಎಸ್.ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ ಅಶೋಕ ನಾಯ್ಕ, ಬಹುಜನ ಸಮಾಜ ಪಾರ್ಟಿಯ ಎ.ಡಿ ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾ ದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.ಟಿ, ಪ್ರವೀಣ್ ನಾಯ್ಕ್ ನಡುವೆ ಪೈಪೋಟಿ ನಡೆಯಲಿದೆ.

ಸೊರಬ ಕ್ಷೇತ್ರ: ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್​ನಿಂದ ಬಿ.ಚಂದ್ರಪ್ಪಗೌಡ, ಸಮಾಜವಾದಿ ಪಾರ್ಟಿ ಪರಶುರಾಮ ವಿ.ಜಿ, ಎಎಪಿ ಚಂದ್ರಶೇಖರ ಕೆ.ವೈ, ಉತ್ತಮ ಪ್ರಜಾಕೀಯ ಪಾರ್ಟಿ ಲಕ್ಷ್ಮೀಕಾಂತ ಸಿ.ಎಸ್, ಐಎನ್‍ಸಿ ಮಧು ಬಂಗಾರಪ್ಪ, ಬಿಜೆಪಿ ಎಸ್.ಕುಮಾರ್ ಬಂಗಾರಪ್ಪ, ಕೆಆರ್​​ಎಸ್ ​ಟಿ.ಮಂಜುನಾಥ, ಪಕ್ಷೇತರ ಶಿವಯೋಗಿ ಎಸ್.ಎಸ್, ಗುಡ್ಡಪ್ಪ, ಜೆ.ಎಸ್.ಚಿದಾನಂದ ಗೌಡ ಕಣದಲ್ಲಿದ್ದಾರೆ.

ಸಾಗರ ಕ್ಷೇತ್ರ: ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಸೈಯದ್ ಜಾಕಿರ್, ಕೆಆರ್​ಎಸ್ ಕಿರಣ್.ಬಿ.ಇ, ಬಿಜೆಪಿ ಹೆಚ್.ಹಾಲಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ ಸೋಮರಾಜ ಎನ್, ಐಎನ್‍ಸಿ ಗೋಪಾಲಕೃಷ್ಣ ಬೇಳೂರು, ಎಎಪಿ ಕೆ.ದಿವಾಕರ, ಪಕ್ಷೇತರ ಶಿವಕುಮಾರ ಕೆ.ವಿ, ಹರಟೆ ಗಾಮಪ್ಪ, ಟಿ.ಎನ್ ಶ್ರೀನಿವಾಸ ಕಣದಲ್ಲಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ನಗರದಲ್ಲಿ ಜೆಡಿಎಸ್​ನಿಂದ ಈ ಬಾರಿ ಗೆದ್ದೇ ಗೆಲ್ಲುತ್ತೇವೆ: ಆಯನೂರು ಮಂಜುನಾಥ್

ಕೇಂದ್ರ ಕಾರಾಗೃಹದ ಮೇಲೆ ದಾಳಿ: ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ದಿಢೀರ್ ದಾಳಿ‌ ನಡೆಸಿದೆ. ಶಿವಮೊಗ್ಗ ಹೊರ ವಲಯ ಸೋಗಾನೆಯಲ್ಲಿ ಇರುವ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಎಸ್​​ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

shivamogga
ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ದಾಳಿ‌

ಚುನಾವಣೆ ಹಿನ್ನೆಲೆ ಕಾರಾಗೃಹದ ಮೇಲೆ ಸುಮಾರು 60ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಏಕಾ ಕಾಲದಲ್ಲಿ ದಾಳಿ ನಡೆಸಿದ್ದರು. ದಾಳಿಯ ವೇಳೆ ಜೈಲ್​​ನ ಎಲ್ಲಾ ಬ್ಯಾರಕ್​ಗಳಲ್ಲಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯಾವುದೇ ವಸ್ತುಗಳು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಎಸ್​​ಪಿ ಮಿಥುನ್ ಕುಮಾರ್ ಜಿ.ಕೆ, ಎಸ್​ಪಿ ಅನಿಲ್ ಕುಮಾರ್ ಭೂಮ ರೆಡ್ಡಿ, ಡಿವೈಎಸ್​ಪಿ ಬಾಲರಾಜ್, ತುಂಗಾ ನಗರ ಪಿಐ ಮಂಜುನಾಥ್, ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಜಯನಗರ ಪಿಐ ಗಜೇಂದ್ರಪ್ಪ ಸೇರಿದಂತೆ ಸುಮಾರು 60 ಜನ ಪೊಲೀಸರು ದಾಳಿ ನಡೆಸಿದ್ದರು.

ಇದನ್ನೂ ಓದಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಕಟ್ಟಿಹಾಕಲು ಪ್ರತಿಪಕ್ಷಗಳ ರಣತಂತ್ರ: ಪ್ರಾಬಲ್ಯಕ್ಕಾಗಿ ಕೈ-ದಳ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.