ಶಿವಮೊಗ್ಗ: ದೇಶದೆಲ್ಲೆಡೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸದೆ ಕರ್ತವ್ಯಲೋಪ ಎಸಗಿ, ಕೇಂದ್ರ ಸ್ಥಾನದಲ್ಲಿರದೆ ಬೇರೆಡೆಯಿದ್ದ ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇವೆಯಿಂದ ಅಮಾನತು ಮಾಡಿದ್ದಾರೆ.
ಶಿರಾಳಕೊಪ್ಪ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಹನುಂತಪ್ಪ ಮಣ್ಣವಡ್ಡರ್ ಅಮಾನತುಗೊಂಡವರು. ಇವರು ಶಿಕಾರಿಪುರ ತಹಶಿಲ್ದಾರ್ ಆದೇಶಿದಂತೆ ಕೊರೊನಾ ವೈರಸ್ ಬಗ್ಗೆ ಪಟ್ಟಣದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಲ್ಲದೆ, ಕೇಂದ್ರ ಸ್ಥಾನ ಶಿರಾಳಕೊಪ್ಪದಲ್ಲಿರದೆ, ಹಾವೇರಿಯಲ್ಲಿ ಓಡಾಟ ನಡೆಸುತ್ತಿದ್ದರೆಂಬ ಆರೋಪದ ಮೇರೆಗೆ ಜಿಲ್ಲಾಧಿಕಾರಿ ಅಮಾನತು ಶಿಕ್ಷೆ ವಿಧಿಸಿದ್ದಾರೆ.