ETV Bharat / state

ಶಿಮುಲ್‍ಗೆ ಎಫ್‍ಎಸ್‍ಎಸ್‍ಸಿ ದೃಢೀಕರಣ ಪತ್ರ! - ಐಎಸ್‍ಓ ವಿಶ್ವಮಾನ್ಯತೆ ಪಡೆದ ಸಂಸ್ಥೆ

ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022ರ ಜುಲೈ ಮಾಹೆಯಲ್ಲಿ ಎಫ್‍ಎಸ್‍ಎಸ್‍ಸಿ ದೃಢೀಕರಣ ಪ್ರಮಾಣ ಪತ್ರ ನೀಡಲಾಗಿದೆ.

kn_smg_05_
ಶಿಮುಲ್‍ಗೆ ಎಫ್‍ಎಸ್‍ಎಸ್‍ಸಿ ದೃಢೀಕರಣ ಪತ್ರ
author img

By

Published : Sep 7, 2022, 3:30 PM IST

ಶಿವಮೊಗ್ಗ: ಶಿಮುಲ್​ಗೆ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ) 2022ರ ಜುಲೈ ಮಾಹೆಯಲ್ಲಿ ಉತ್ಕಷ್ಟ ಗುಣಮಟ್ಟದ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ (ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ ಪ್ರಮಾಣ ಪತ್ರ ನೀಡಲಾಗಿದೆ.

ಒಕ್ಕೂಟದ ಮಾಚೇನಹಳ್ಳಿ ಕಚೇರಿಯಲ್ಲಿ SS:22000:5.1 ದೃಢೀಕರಣ ಪತ್ರವನ್ನು ಅಧ್ಯಕ್ಷರಾದ ಶ್ರೀಪಾದರಾವ್‍ ಅವರು ನಿರ್ದೇಶಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು.

2016ರ ಜುಲೈ ಮಾಹೆಯಲ್ಲಿ ಐಎಸ್‍ಓ(ಇಂಟರ್​ ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟ್ಯಾಂಡರ್ಡ್) 22000 - 2005 ದೃಢೀಕರಣ ಪ್ರಮಾಣ ಪತ್ರ ಒಕ್ಕೂಟಕ್ಕೆ ಲಭಿಸಿತ್ತು. ಈ ದೃಢೀಕರಣವು ರಾಷ್ಟ್ರಮಟ್ಟದಲ್ಲಿ ಮಹತ್ವ ಹೊಂದಿದ್ದು, ಉತ್ಕೃಷ್ಟ ಹಾಗೂ ಗುಣಮಟ್ಟದ ಪ್ರತೀಕವಾಗಿರುತ್ತದೆ. ಆದಕಾರಣ ಉತ್ತಮ ಮಾರುಕಟ್ಟೆ ಒದಗಿಸಲು ಸಹಕಾರಿಯಾಗಿರುತ್ತದೆ. ಇದರ ಮುಂದುವರಿದು ಆವೃತ್ತಿಯಾದ SS:22000:5.1 ದೃಢೀಕರಣ ಪತ್ರವು ಈ ವರ್ಷದ ಜುಲೈ ಮಾಹೆಯಲ್ಲಿ ಲಭಿಸಿದೆ.

ಐಎಸ್‍ಓ ವಿಶ್ವಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಆಹಾರ ಸಂಸ್ಕರಣಾ ಘಟಕಗಳಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳ ಗುಣಮಟ್ಟವನ್ನು, ಗ್ರಾಹಕರ ಹಂತದಲ್ಲಿ ಪರೀಕ್ಷೆ ಮಾಡಿ, ಆಹಾರ ಪದಾರ್ಥಗಳಿಂದ ಗ್ರಾಹಕರಿಗೆ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಮನಿಸಲಾಗಿರುತ್ತದೆ.

ವಿವಿಧ ರಾಷ್ಟ್ರಗಳ ಸದಸ್ಯತ್ವ ಹೊಂದಿದ ತಾಂತ್ರಿಕ ಅಧ್ಯಯನ ಸಮಿತಿಯು ಸಂಸ್ಕರಣ ಪದ್ದತಿ, ಮೂಲ ಸೌಕರ್ಯ ಲಭ್ಯತೆ, ತಾಂತ್ರಿಕ ನೈಪುಣ್ಯತೆ ಹೊಂದಿದ ಅಧಿಕಾರಿ/ಸಿಬ್ಬಂದಿ ಇರುವಿಕೆ, ಇತ್ಯಾದಿ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಉತ್ಪಾದನಾ ವಿಧಿವಿಧಾನಗಳು, ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಚತೆ ಹಾಗೂ ಮೂಲ ಸೌಕರ್ಯಗಳ ಪರಿಶೋಧನೆ ಮಾಡಿಸಿ, ನಿಯಮಾವಳಿಗಳ ಪ್ರಕಾರ ಆಹಾರ ಉತ್ಪನ್ನಗಳನ್ನು ಘಟಕಗಳು ಉತ್ಪಾದನೆ ಮಾಡಿದ್ದಲ್ಲಿ ಮಾತ್ರ ಐಎಸ್‍ಓ ದೃಢೀಕರಣ ಪ್ರಮಾಣ ನೀಡಲಾಗುತ್ತದೆ. ಅಂತಹ ಪ್ರಮಾಣಪತ್ರವನ್ನು ಒಕ್ಕೂಟ ಪಡೆದಿದೆ.

ಇದನ್ನೂ ಓದಿ: ಗುಜರಾತ್​​​ನಲ್ಲಿ ಪ್ರವಾಸೋದ್ಯಮ ಮೇಳ: ಗಮನ ಸೆಳೆದ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.