ಶಿವಮೊಗ್ಗ: ಮನೆಯಲ್ಲಿದ್ದ ಮಗುವೊಂದು ದಿಢೀರ್ ಕಾಣೆಯಾಗಿದೆ ಎಂದು ಪೋಷಕರು ಹುಡುಕಾಟ ನಡೆಸಿ, ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಸಾಗರದಲ್ಲಿ ನಡೆದಿದೆ.
ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಸಂಜೆ ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ಆಂತಕದಲ್ಲಿ ಹುಡುಕಾಡಿದ್ದಾರೆ. ನಂತರ ಕಿಡ್ನಾಪ್ ಆಗಿರಬಹುದೆಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಪೊಲೀಸರು ಹುಡುಕಾಟ ಆರಂಭಿಸಿದ್ದರು.
ಆದ್ರೆ ಮಗು ಮನೆಯಲ್ಲೇ ಪೇಪರ್ ಬಾಕ್ಸ್ನಲ್ಲಿ ಆಟ ಆಡುತ್ತಾ ಕುಳಿತುಕೊಂಡಿತ್ತು. ಮಗು ಕಂಡು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.