ಶಿವಮೊಗ್ಗ : ಜಿಲ್ಲೆಯ ಮಂಡಗದ್ದೆ ಗ್ರಾಮದಲ್ಲಿ ಹರಿದುಹೋಗುವ ತುಂಗಾ ನದಿಯ ಮಧ್ಯಭಾಗದ ದ್ವೀಪದಂತಿರುವ ಪ್ರದೇಶದಲ್ಲಿ ಪ್ರತಿವರ್ಷ ಸೈಬೀರಿಯಾದಿಂದ ಪಕ್ಷಿಗಳು ವಲಸೆ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಂಡು ಬಳಿಕ ತಮ್ಮ ದೇಶಕ್ಕೆ ವಾಪಸ್ ಹೋಗುತ್ತಿದ್ದವು.
ಆದರೆ, ಇದೀಗ ದ್ವೀಪದಂತಿರುವ ಪ್ರದೇಶದಲ್ಲಿರುವ ಮರಗಳು ತುಂಗೆಯ ಆರ್ಭಟಕ್ಕೆ ಕಳೆದ ಕೆಲ ವರ್ಷದಿಂದ ಕೊಚ್ಚಿಕೊಂಡು ಹೋಗುತ್ತಿವೆ. ಹೀಗಾಗಿ, ಮರಗಳಲ್ಲಿ ಗೂಡುಕಟ್ಟಿಕೊಂಡಿರುವ ಪಕ್ಷಿಗಳು ನದಿಯಲ್ಲಿ ತೇಲಿ ಹೋಗುವ ಸ್ಥಿತಿ ಇದೆ.
ಈ ಪಕ್ಷಿಧಾಮ ಉಳಿಸಬೇಕೆಂಬ ಹಿನ್ನೆಲೆಯಲ್ಲಿ ದ್ವೀಪದಂತ ಪ್ರದೇಶದಲ್ಲಿನ ವೈಟೆಕ್ಸ್ ಮರಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿಂದೆ ಪಕ್ಷಿಧಾಮದ ಸುತ್ತಲೂ ತಡೆಗೋಡೆ ನಿರ್ಮಿಸಿ ಮರಗಳು ಕೊಚ್ಚಿಕೊಂಡು ಹೋಗದಂತೆ ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಅನುಷ್ಠಾನವಾಗಿಲ್ಲ. ಹೀಗಾಗಿ, ಪ್ರತಿವರ್ಷ ಮಳೆಗಾಲದಲ್ಲಿ ಪಕ್ಷಿಧಾಮದ ಮರಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ.
![Mandagadde Bird Sanctuary is in danger condition](https://etvbharatimages.akamaized.net/etvbharat/prod-images/kn-smg-03-mandagadde-bird-sanchury-spl-pkg-ka10011_10072021163555_1007f_1625915155_353.jpg)
ಇಲ್ಲಿರುವ ಮರಗಳನ್ನು ಉಳಿಸಿದರೆ ಮಾತ್ರ ಪಕ್ಷಿಧಾಮ ಉಳಿಯಲು ಸಾಧ್ಯ. ಮರಗಳನ್ನು ಉಳಿಸುವ ಮೂಲಕ ಬಾನಾಡಿಗಳ ಸಂತಾನೋತ್ಪತ್ತಿಗೆ ನೆರವಾಗಬೇಕಿದೆ.
![Mandagadde Bird Sanctuary is in danger condition](https://etvbharatimages.akamaized.net/etvbharat/prod-images/kn-smg-03-mandagadde-bird-sanchury-spl-pkg-ka10011_10072021163555_1007f_1625915155_992.jpg)